ಕುಂದಾಪುರ (ಸೆ.2) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಇಂದು ವಿದ್ಯಾರ್ಥಿಗಳಿಗಾಗಿ ” ಮಕ್ಕಳು ಮತ್ತು ಕಾನೂನಿನ ಅರಿವು “ ಎಂಬ ವಿಷಯದ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಕೀಲೆ, ಲೇಖಕಿ, ಅಂಕಣಗಾರ್ತಿ, ಜೀವನ ಕೌಶಲ್ಯ ತರಬೇತುದಾರೆ ಹಾಗೂ ಬೆಂಗಳೂರಿನ ಅಸ್ಥಿತ್ವ ಲೀಗಲ್ ಟ್ರಸ್ಟ್ ನ ಸಂಸ್ಥಾಪಕಿಯಾಗಿರುವ ಶ್ರೀಮತಿ ಅಂಜಲಿ ರಾಮಣ್ಣ ಆಗಮಿಸಿ, ಮಕ್ಕಳು ಮತ್ತು ಕಾನೂನಿನ ಅರಿವು ವಿಷಯದ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿ, ಮಕ್ಕಳ ರಕ್ಷಣೆ, ಮಕ್ಕಳ ಬಗೆಗಿನ ಕಾನೂನುಗಳ ಬಗ್ಗೆ ಅತ್ಯುತ್ತಮವಾದ ಮಾಹಿತಿಯನ್ನು ಅರುಹಿದರು.. ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರೂ, ಸಂಸ್ಥೆಯ ಸಂಚಾಲಕರೂ ಆಗಿರುವ ಶ್ರೀ ಬಿ ಎಂ ಸುಕುಮಾರ್ ಶೆಟ್ಟಿ, ಸಿ ಇ ಎಸ್ ನ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ವಿ ಕೆ ಆರ್ ಆಚಾರ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ ಎನ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸ್ವಪ್ನ ಸತೀಶ್, ದಿವ್ಯ ಎಚ್ ಹಾಗೂ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.