ಮೂಡುಬಿದಿರೆ(ಸೆ04): ‘ಸಂವಿಧಾನಾತ್ಮಕ ಮೌಲ್ಯಗಳು’ ರಾಜ್ಯ ಪಠ್ಯಕ್ರಮದ ಕಾರ್ಯಾಗಾರವು ಇಲ್ಲಿನ ಶ್ರೀ ದವಳ ಕಾಲೇಜಿನಲ್ಲಿ ಸೆ. 2ರಂದು ನಡೆಯಿತು.
ಶ್ರೀ ಧವಳ ಕಾಲೇಜು ಮತ್ತು ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರೀ ದವಳ ಕಾಲೇಜಿನ ಕಾನ್ಫರೆನ್ಸ್ ಹಾಲಿನಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿದ ಡಿ ಜೆ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ಅವರು ಮಾತನಾಡಿ ಸಂವಿಧಾನಾತ್ಮಕ ಮೌಲ್ಯಗಳು ಪ್ರತಿಯೊಬ್ಬನಿಗೆ ಕೂಡ ಬಹಳ ಅಗತ್ಯವಾದ ವಿಚಾರವಾಗಿದ್ದು ಸಾಮಾಜಿಕವಾಗಿ ಅದು ತಿಳಿಸಲ್ಪಟ್ಟರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಕಾಲೇಜಿನ ಪ್ರಾಚಾರ್ಯ ಶ್ರೀ ಪಾರ್ಶ್ವನಾಥ ಅಜ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂವಿಧಾನಾತ್ಮಕ ಮೌಲ್ಯಗಳ ತಿಳಿವಳಿಕೆ ಇವತ್ತಿನ ಜನಸಾಮಾನ್ಯರಿಗೆ ಅತ್ಯಂತ ಅವಶ್ಯವಾಗಿದ್ದು ಇದನ್ನು ತಲುಪಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಶಿಕ್ಷಕರಿಗಾಗಿ ಇಂತಹ ಕಾರ್ಯಗಾರಗಳನ್ನು ನಡೆಸುವುದು ಬಹಳ ಅವಶ್ಯವಾಗಿದ್ದು ಸರಿಯಾದ ವಿಚಾರ ಸರಿಯಾದ ಯುವ ಮನಸ್ಸಿಗೆ ತಲುಪಿದಾಗ ಅಲ್ಲೊಂದು ಫಲಿತಾಂಶ ಮೂಡುವುದಕ್ಕೆ ಸಾಧ್ಯ ಎಂದರಲ್ಲದೆ ಶ್ರೀ ಧವಳ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನ ಆಯೋಜಿಸಿದುದಕ್ಕಾಗಿ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಜಯರಾಜ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಪಠ್ಯಕ್ರಮದ ವಿಚಾರ ಧಾರೆಗಳನ್ನು ಹಾಗೂ ಅದರ ಪ್ರಸ್ತುತ ಅವಶ್ಯಕತೆಗಳ ಬಗ್ಗೆ ಸುಧೀರ್ಘವಾಗಿ ವಿವರಿಸಿದರು. ವಿದ್ಯಾರ್ಥಿಗಳನ್ನು ತಲುಪುವಲ್ಲಿ ಶಿಕ್ಷಕರ ಪಾತ್ರ ಶಿಕ್ಷಕರ ಜ್ಞಾನದ ಮಟ್ಟ ಬಹಳ ಅವಶ್ಯಕತೆ ಇದೆ ಅದಕ್ಕೋಸ್ಕರ ಪ್ರತಿಯೊಬ್ಬ ಶಿಕ್ಷಕನು ಪ್ರತಿಯೊಂದು ವಿಷಯದ ಮೇಲೆಯೂ ಸುದೀರ್ಘ ಅಧ್ಯಯನ ಮಾಡಬೇಕಾಗಿದೆ, ಅಲ್ಲದೆ ಸಂವಿಧಾನದ ಅವಶ್ಯಕತೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಸರಿಯಾದ ವಿಚಾರಧಾರೆಯ ಮೂಲಕ ನಡೆ ಸುವುದು ಒಬ್ಬ ಶಿಕ್ಷಕನ ಆಧ್ಯ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ಶಿಕ್ಷಕರ ಸಂಘ ಅಧ್ಯಕ್ಷ ಡಾ. ಪ್ರವೀಣ್ ಕೆ. ಅತಿಥಿಯವಾಗಿ ಮಾತನಾಡಿದರು. ಮಂಗಳೂರು ವಿ. ವಿ. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ದಯಾನಂದ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ
ಸಂತೋಷ ಶೆಟ್ಟಿ ಸ್ವಾಗತಿಸಿದರು.
ಉಡುಪಿ ಎಂಜಿಎಂ ಕಾಲೇಜಿನ ಪ್ರಾಧ್ಯಾಪಕ ವಿದ್ಯಾನಾಥ್ ವಂದಿಸಿದರು. ಡಾ. ರೂಪ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಪ್ರೊ. ಜಯರಾಜ ಅಮೀನ್ ಸಂವಿಧಾನದ ಮೌಲ್ಯಗಳ ಬಗ್ಗೆ ಹಾಗೂ ಡಾ. ದಯಾನಂದ ನಾಯಕ್ ಅವರು ಸಂವಿಧಾನ ಮತ್ತು ಭಾರತೀಯ ಸಮಾಜ ಎನ್ನುವ ವಿಷಯದ ಮೇಲೆ ತಮ್ಮ ವಿಷಯವನ್ನು ಮಂಡಿಸಿದರು ಸುಮಾರು 40 ಪ್ರಾಧ್ಯಾಪಕರು ವಿವಿಧ ಕಾಲೇಜುಗಳಿಂದ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.