ಕುಂದಾಪುರ( ಸೆ,15): ಇಲ್ಲಿನ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ ನ್ನು ಸನ್ಮಾನಿಸುವ ಮೂಲಕ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಯಿತು.
ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ ನಿರಕೋಡ್ಲು ಅವರನ್ನು ಕೋಟೇಶ್ವರದ ಅವರ ಸ್ವಗ್ರಹದಲ್ಲಿ ತಾಲೂಕು ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಹಾಗೂ ಜೆ.ಪಿ ಪ್ಯಾಶನ್ ರತ್ನಾಕರ್ ಶೆಟ್ಟಿ ,ಗುತ್ತಿಗೆದಾರರಾದ ಪ್ರಭಾಕರ್ ಶೆಟ್ಟಿ ಸನ್ಮಾನಿಸಿದರು.
ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .
ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಮುರಳೀಧರ ಶೆಟ್ಟಿ ಹುಯ್ಯಾರು, ಖಜಾಂಚಿ ಭರತರಾಜ್ ಶೆಟ್ಟಿ ಜಾಂಬೂರು , ಉಪಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು,ಸುನಿಲ್ ಶೆಟ್ಟಿ ಹೇರಿಕುದ್ರು ,ಪ್ರಶಾಂತ ಶೆಟ್ಟಿ ಶಿರೂರು ಉಪಸ್ಥಿತರಿದ್ದರು. ದಶಮ ಸಂಭ್ರಮದ ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.