ಮಡಗಾವ್ (ಜ.19): ತುಳು, ಕನ್ನಡ ಎನ್ನುವ ಭಾಷಿಕವಾದ ಒಳ ಬಿನ್ನತೆ ಸಂಘಟನೆಯಲ್ಲಿ ಬರಬಾರದು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಪ್ರಾದೇಶಿಕ ಭಿನ್ನತೆಯನ್ನು ಮೀರಿ ಬಂಟ ಸಮುದಾಯದ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಗೋವಾದ ಲಕ್ಷ್ಮಿ ಎಂಪೈರ್ ಹೋಟೆಲ್ ನಲ್ಲಿ ಜನವರಿ 19 ರಂದು ಆಯೋಜಿಸಿದ ಗೋವಾ ಬಂಟರ ಸಂಘದ ರಜತ ಸಂಭ್ರಮ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು. […]
Tag: nithyananada ampar
ಡಾ. ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ನಮ್ಮೂರ ಕೀರ್ತಿ ಕಳಶ ಪ್ರಶಸ್ತಿ ಪ್ರದಾನ
ಕುಂದಾಪುರ (ಜ,11): ಸೇವಾ ಚೇತನ ಟ್ರಸ್ಟ್ (ರಿ) ಮೂಡುಬಗೆ ಅಂಪಾರು ಇದರ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಜನವರಿ 11ರಂದು ಅಂಪಾರು ಮೂಡುಬಗೆ ಶಾನ್ಕಟ್ಟು ಮೈದಾನದಲ್ಲಿ ನಡೆದ ನಮ್ಮೂರ ಸಂಭ್ರಮ ಕಾರ್ಯಕ್ರಮದಲ್ಲಿ ಸಂಘಟಕ, ಪ್ರಾಧ್ಯಾಪಕ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರಿಗೆ 2024ರ ನಮ್ಮೂರ ಕೀರ್ತಿ ಕಳಶ ಪ್ರಶಸ್ತಿ ಪ್ರಧಾನವನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರು, ಜಯದೇವ ಹೃದ್ರೋಗ ಆಸ್ಪತ್ರೆಯ ಆಡಳಿತ ನಿರ್ದೇಶಕರೂ ಅದ ಡಾ. ಸಿ.ಎನ್. ಮಂಜುನಾಥ್ ಪ್ರಶಸ್ತಿ ಪ್ರದಾನ […]
ಗೋವಾ ಬಂಟರ ಸಂಘ ರಜತ ಸಂಭ್ರಮದ ಲಾಂಛನ ಬಿಡುಗಡೆ
ಪಣಜಿ(ಡಿ, 05): ಗೋವಾ ಬಂಟರ ಸಂಘದ ವತಿಯಿಂದ 2025 ರ ಜನವರಿ 19ರಂದು ನಡೆಯಲಿರುವ ರಜತ ಸಂಭ್ರಮ ಕಾರ್ಯಕ್ರಮದ ಲಾಂಛನ ಬಿಡುಗಡೆ ಡಿಸೆಂಬರ್ 01 ರಂದು ನಡೆದ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕಾವಡಿ ಸದಾಶಿವ ಶೆಟ್ಟಿ ಅನಾವರಣ ಮಾಡಿದರು. ಗೋವಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಶ್ರೀ ಪ್ರಶಾಂತ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಶ್ರೀ ವಿಜಯೇಂದ್ರ ಶೆಟ್ಟಿ ಕಬ್ಯಾಡಿ, […]
ಯುವ ಬಂಟರ ಸಂಘದ ವತಿಯಿಂದ ಯುವ ಸಾಧಕನಿಗೆ ಸನ್ಮಾನ
ಕುಂದಾಪುರ(ಅ,10 ): ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ 2024 ನೇ ಸಾಲಿನ ತೆಲಂಗಾಣ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನೆಡೆಸಿದ 10 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 10 ಕ್ಕೆ 10 ಸಿಜಿಪಿಎ ಗಳಿಸುವ ಮೂಲಕ ತೆಲಂಗಾಣ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಂದಾಪುರ ತಾಲೂಕಿನ ತೆಕ್ಕೆಟ್ಟೆಯ ಮಲ್ಯಾಡಿ ಗ್ರಾಮದ ಯುವ ಸಾಧಕ ಶ್ರೀ ಮುಗ್ಧ ಶೆಟ್ಟಿ ಅವರನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಸ್ಥಾಪಕ […]
ಕುಂದಾಪುರ ಯುವ ಬಂಟರ ಸಂಘ : ಇಂಜಿನಿಯರ್ ಗೆ ಸನ್ಮಾನ
ಕುಂದಾಪುರ( ಸೆ,15): ಇಲ್ಲಿನ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ ನ್ನು ಸನ್ಮಾನಿಸುವ ಮೂಲಕ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಯಿತು. ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ ನಿರಕೋಡ್ಲು ಅವರನ್ನು ಕೋಟೇಶ್ವರದ ಅವರ ಸ್ವಗ್ರಹದಲ್ಲಿ ತಾಲೂಕು ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಹಾಗೂ ಜೆ.ಪಿ ಪ್ಯಾಶನ್ ರತ್ನಾಕರ್ ಶೆಟ್ಟಿ ,ಗುತ್ತಿಗೆದಾರರಾದ ಪ್ರಭಾಕರ್ ಶೆಟ್ಟಿ ಸನ್ಮಾನಿಸಿದರು.ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ […]
ಕುಂದಾಪುರ ತಾಲೂಕು ಯುವ ಬಂಟರ ಸಂಘ: ಶಿಕ್ಷಕ ದಂಪತಿಗಳಿಗೆ ಸನ್ಮಾನ
ಕುಂದಾಪುರ (ಸೆ, 5): ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಶಿಕ್ಷಕ ದಂಪತಿಗಳಿಗೆ ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಿಕ್ಷಕ ದಂಪತಿಗಳಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ದಿನಕರ್ ಆರ್ ಶೆಟ್ಟಿ ಮತ್ತು ಅವರ ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಸವಿತಾ ಶೆಟ್ಟಿ ಅವರನ್ನು ಬಸ್ರೂರಿನ ಅವರ ಸ್ವಗ್ರಹದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷರಾದ ಶ್ರೀ ನಿತೀಶ್ […]
ಅಂಪಾರು:ನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನ
ಕುಂದಾಪುರ(ಸೆ,5): ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಸಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ಅಂಪಾರಿನ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಹೇರೂರು ದೊಡ್ಡಮನೆ ಎಚ್ ಬಿ ಬಾಬಯ್ಯ ಶೆಟ್ಟಿ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ವಕ್ವಾಡಿ ಭಾಸ್ಕರ್ ಶೆಟ್ಟಿ ವಹಿಸಿದ್ದರು. ಗೌರವಾಧ್ಯಕ್ಷರಾದ ಶ್ರೀ ವಕ್ವಾಡಿ ದಿನಕರ್ ಶೆಟ್ಟಿ, ಸಂಘದ ಕಾರ್ಯದರ್ಶಿ […]
ಕುಂದಾಪುರ ತಾಲೂಕು ಯುವ ಬಂಟರ ಸಂಘ: ಗೌರವಾಧ್ಯಕ್ಷರಾಗಿ ಶ್ರೀಮತಿ ವತ್ಸಲಾ ದಯಾನಂದ ಶೆಟ್ಟಿ ಆಯ್ಕೆ
ಕುಂದಾಪುರ(ಆ,14): ಕುಂದಾಪುರ ತಾಲೂಕು ಯುವ ಬಂಟರ ಸಂಘದ 2024 – 26 ನೇಯ ಸಾಲಿನ ಗೌರವಾಧ್ಯಕ್ಷರಾಗಿ ಅಂಕದಕಟ್ಟೆಯ ಮಂಜುಶ್ರೀ ಕನ್ಸ್ಟ್ರಕ್ಷನ್ ನ ಆಡಳಿತ ಪಾಲುದಾರರಾದ ಶ್ರೀಮತಿ ವತ್ಸಲಾ ದಯಾನಂದ ಶೆಟ್ಟಿ ಆಯ್ಕೆ ಆಗಿರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಯುವ ಬಂಟರ ಸಂಘದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು ದತ್ತಿನಿಧಿ ಪೋಷಕರಾಗಿ, ದಶಮಾನೋತ್ಸವದ ಗೌರವ ಮಹಾಪೋಷಕರಾಗಿ, ಪ್ರಸ್ತುತ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿ ವೇತನ ಸಮಿತಿಯ ಸಂಚಾಲಕರಾಗಿ ಡಾ. ಚೇತನ್ ಶೆಟ್ಟಿ ಕೋವಾಡಿ ಆಯ್ಕೆ
ಕುಂದಾಪುರ( ಅ,05): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆಗಸ್ಟ್ 18 ರ ಭಾನುವಾರ ಯುವ ಮೆರಿಡಿಯನ್ ನಲ್ಲಿ ನಡೆಯಲಿರುವ ವಿದ್ಯಾರ್ಥಿ ವೇತನ ಸಮಿತಿಯ ಸಂಚಾಲಕರಾಗಿ ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲರೂ, ಸಾಹಿತ್ತಿಕ ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಪ್ರಕರ ವಾಗ್ಮಿಗಳಾದ ಡಾ. ಚೇತನ್ ಶೆಟ್ಟಿ ಕೋವಾಡಿ ಆಯ್ಕೆಯಾಗಿದ್ದಾರೆ. ಸಂಘದ ಗೌರವಾಧ್ಯಕ್ಷರಾದ ಬಿ. ಉದಯ್ ಕುಮಾರ್ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷರಾದ ಡಾ. ಅಂಪಾರು […]
ಕುಂದಾಪುರ ತಾಲೂಕು ಯುವ ಬಂಟರ ಸಂಘ: 25 ಲಕ್ಷ ರೂ. ಪ್ರೊತ್ಸಾಹ ಧನ ವಿತರಣೆ
ಕುಂದಾಪುರ(ಜು.27): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಬಂಟ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಮತ್ತು ಅವಕಾಶಗಳಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳಡಿ ಪ್ರೋತ್ಸಾಹಧನ ವಿತರಣಾ ಸಮಾರಂಭವು ಆಗಷ್ಟ್ 18 ರಂದು ಭಾನುವಾರ ಪೂರ್ವಾಹ್ನ 9.30 ಕ್ಕೆ ಕೋಟೇಶ್ವರದ ಯುವ ಮೆರಿಡಿಯನ್ ಸಭಾಭವನದಲ್ಲಿ ನಡೆಯಲಿದೆ. 2024 ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 95% ಕ್ಕಿಂತ ಅಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ […]