ಗಂಗೊಳ್ಳಿ (ಸೆ.19): ರಾ .ಫಿಟ್ನೆಸ್ ಸಾಲಿಗ್ರಾಮ ಇವರ ವತಿಯಿಂದ ಸಾಲಿಗ್ರಾಮದ ಮೊಗವೀರ ಭವನದಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯ ಕ್ಲಾಸಿಕ್ ಮತ್ತು ಇಕ್ಯುಪ್ಡ್ 69 ಕೆಜಿ ಸಬ್ ಜೂನಿಯರ್ ವಿಭಾಗದಲ್ಲಿ ಗಂಗೊಳ್ಳಿಯ ವೈಷ್ಣವಿ ಖಾರ್ವಿ ಇವರು ಎರಡೂ ವಿಭಾಗಗಳಲ್ಲಿ ದ್ವಿತೀಯ ಸ್ಥಾನವನ್ನು ಗಳಿಸುವುದರ ಮೂಲಕ ಬೆಳ್ಳಿಯ ಪದಕಗಳನ್ನು ಗಳಿಸಿರುತ್ತಾರೆ.
ಈಕೆ ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ (ರಿ )ಹಾಗೂ ಕಿಂಗ್ ಫಿಷರ್ ಸ್ಪೋರ್ಟ್ಸ್ ಕ್ಲಬ್( ರಿ ) ಈ ಸಂಸ್ಥೆಯ ಸದಸ್ಯರಾಗಿದ್ದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿನಿ. ಅಂತರಾಷ್ಟ್ರೀಯ ಪವರ್ ಲಿಫ್ತರ್ ಸತೀಶ್ ಖಾರ್ವಿ ಇವರು ತರಬೇತಿ ನೀಡಿರುತ್ತಾರೆ.