ಕಾರ್ಕಳ( ಸೆ,22) : ಇತ್ತೀಚೆಗೆ ಬಾಸ್ಕೆಟ್ಬಾಲ್ ಕ್ರೀಡೆಯು ಯುವಮನಸ್ಸುಗಳನ್ನು ಸೆಳೆಯುತ್ತಿದೆ. ಬಾಸ್ಕೆಟ್ಬಾಲ್ ಬಾಕ್ಸ್ನಂತೆ ಕ್ರೀಡಾಳುಗಳ ಪ್ರತಿಭೆಯು ಎತ್ತರಕ್ಕೆ ಏರಬೇಕು. ಸೋತವರು ಬೇಸರ ಪಡದೆ ಗೆದ್ದವರು ಬೀಗದೆ ಬಾಗಿ ನಡೆದು ತೋರುವ ಆದರ್ಶ ವ್ಯಕ್ತಿಗಳಾಗ ಬೇಕು ಎಂದು ಕಾರ್ಕಳದ ಎಸ್.ಎನ್.ವಿ. ಪ.ಪೂ.ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರದೀಪ್ ಎನ್. ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳನ್ನು ಗೌರವಿಸಿ ಮಾತನಾಡಿದರು.
ಪಂದ್ಯಾಟದಲ್ಲಿ ಉಡುಪಿಯ ಎಂ.ಜಿ.ಎಂ ಪದವಿ ಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡವು ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರೆ, ಕಾರ್ಕಳ ಜ್ಞಾನಸುಧಾ ಪ.ಪೂ.ಕಾ.ಬಾಲಕಿಯರ ತಂಡ ಹಾಗೂ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ.ಪೂ. ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನಿಯಾಗಿ ಪದಕಗಳಿಗೆ ಕೊರಳೊಡಿದ್ದರು. ವಿಜೇತ ತಂಡಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಶುಭ ಹಾರೈಸಿ ಅಭಿನಂದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್ ವಹಿಸಿದ್ದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ದೈ.ಶಿ.ಉಪನ್ಯಾಸಕ ಸಂಘದ ಅಧ್ಯಕ್ಷ ಶ್ರೀ ಸತೀಶ್ ಹೆಗ್ಡೆ, ತಾ.ದೈ.ಶಿ.ಉಪನ್ಯಾಸಕ ಸಂಘದ ಮೇಲ್ವಿಚಾರಕ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ಉಪಪ್ರಾಂಶುಲರುಗಳಾದ ಸಾಹಿತ್ಯ ಹಾಗೂ ವಾಣಿ ಕೆ., ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಸಂಸ್ಥೆಗಳ ದೈ.ಶಿಕ್ಷಣ ಉಪನ್ಯಾಸಕರಾದ ಅರುಣ್ ಕುಮಾರ್, ಕಿರಣ್ ಹಾಗೂ ರೇಷ್ಮಾ ಸಾಲಿಸ್ ಉಪಸ್ಥಿತರಿದ್ದರು.
ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ಸ್ವಾಗತಿ, ನಿರೂಪಿಸಿದರು. ಕಾಲೇಜಿನ ದೈ.ಶಿ.ಉಪನ್ಯಾಸಕಿ ಶ್ರೀಮತಿ ಸೌಜನ್ಯ ಹೆಗ್ಡೆ ವಂದಿಸಿದರು.