ಕುಂದಾಪುರ (ಸೆ .19): ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಡೇರಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜೇತರಾಗಿ ವಲಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯ ಆಯೋಜಿಸಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 10ನೇ ತರಗತಿಯ ಗಾರ್ಗಿ ದೇವಿ ಭರತನಾಟ್ಯದಲ್ಲಿ, ಅದಿತಿ ಅಡಿಗ ಸಂಸ್ಕೃತ ಭಾಷಣದಲ್ಲಿ, ಕೀರ್ತನಾ ವಿ. ಶೆಟ್ಟಿ ಕನ್ನಡ ಭಾಷಣದಲ್ಲಿ, ಸುಹಾ ಶೈಖ್ ಗಝನಲ್ಲಿ ಪ್ರಥಮ ಸ್ಥಾನ ಗಳಿಸಿ ವಲಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
10ನೇ ತರಗತಿಯ ಪೂವಿಕ್ ರಾವ್ ಸಂಸ್ಕೃತ ಧಾರ್ಮಿಕ ಪಠಣದಲ್ಲಿ, 9ನೇ ತರಗತಿಯ ಭಾರ್ಗವ್ ಆರ್. ಚಿತ್ರಕಲೆಯಲ್ಲಿ, ಕೌಸ್ತುಭ್ ಉಡುಪ ಭಾವಗೀತೆಯಲ್ಲಿ, ನಿರಂಜನ್ ಉಡುಪ ಜಾನಪದಗೀತೆಯಲ್ಲಿ, 8ನೇ ತರಗತಿಯ ಮಹಮ್ಮದ್ ಸಲ್ಮಾನ್ ಅರೇಬಿಕ್ ಧಾರ್ಮಿಕ್ ಪಠಣದಲ್ಲಿ ಮತ್ತು ರತ್ವಿಕ್ ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
10ನೇ ತರಗತಿಯ ಅಶ್ವಿತಾ ಎಸ್ ರಾವ್ ಇಂಗ್ಲೀಷ್ ಭಾಷಣದಲ್ಲಿ, ವಿನ್ಯಾಸ್ ಅಡಿಗ ಮತ್ತು ಭಾರ್ಗವ ಆರ್. ರಸಪ್ರಶ್ನೆಯಲ್ಲಿ, 9ನೇ ತರಗತಿಯ ತೃಪ್ತಿ ಶೆಟ್ಟಿ ಹಿಂದಿ ಭಾಷಣದಲ್ಲಿ, ಅನ್ವಿತಾ, ಪ್ರಾಂಜಲ್ ಎಸ್., ಶ್ರವಣ್, ಕೌಶಿಕ್, ಕನ್ನಿಕಾ ಮತ್ತು ಸೌಜನ್ಯ ಎಸ್. ಪಡುಕೋಣೆ ಜಾನಪದ ನೃತ್ಯದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ವಿಜೇತರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ಎಲ್ಲಾ ವಿಭಾಗದ ಮುಖ್ಯ ಶಿಕ್ಷಕರು, ಸಹಾಯಕ ಮುಖ್ಯ ಶಿಕ್ಷಕರು, ಶಿಕ್ಷಣ ಸಂಯೋಜಕರು ಅಭಿನಂದಿಸಿದರು.