ಕುಂದಾಪುರ (ಅ.02): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ಸ್ -ರೇಂಜರ್ಸ್, ಯುವ ರೆಡ್ಕ್ರಾಸ್ ಘಟಕ ಹಾಗೂ ರೋಟರಾಕ್ಟ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅಕ್ಟೋಬರ್ 02ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮದ ಸಮನ್ವಯಕಾರರಾಗಿ ಉಪಸ್ಥಿತರಿದ್ದರು.
ಸನ್ಮಿತಾ ಪ್ರಥಮ ಬಿಸಿಎ (ಎ) ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಮೃದ್ಧಿ ಕಿಣಿ ತೃತೀಯ ಬಿ.ಕಾಂ. (ಬಿ), ಸನ್ಮಿತಾ ದ್ವಿತೀಯ ಬಿ.ಕಾಂ. (ಬಿ), ಸುಪ್ರಜ್ ದ್ವಿತೀಯ ಬಿ.ಕಾಂ. (ಬಿ), ನಾಗರತ್ನ ದ್ವಿತೀಯ ಬಿ.ಕಾಂ. (ಎ), ಶರಣ್ಯ ಪ್ರಥಮ ಬಿ.ಕಾಂ. (ಎ)ರವರು ಗಾಂಧೀಜಿ ಮತ್ತು ಶಾಸ್ತ್ರಿಜಿಯ ಕುರಿತಾದ ಉಪನ್ಯಾಸ ನೀಡಿದರು. ರೋಷನ್ ತೃತೀಯ ಬಿ.ಕಾಂ. (ಬಿ) ವಂದಿಸಿದರು. ರಶ್ಮಿತಾ ಜೈನ್ ದ್ವಿತೀಯ ಬಿ.ಕಾಂ. (ಇ) ಕಾರ್ಯಕ್ರಮ ನಿರೂಪಿಸಿದರು.