ಬೆಂಗಳೂರು (ಆ,18): ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು ಇವರ ಪ್ರಸ್ತುತಿಯಲ್ಲಿ ಸಾವಿತ್ರಿ ವೈಜಯಂತಿ ಗಿರಿಜಾ ಈ ಅಪರೂಪದ ಪೌರಾಣಿಕ ಯಕ್ಷಗಾನ ಪ್ರದರ್ಶನ ಬೆಂಗಳೂರಿನ ಯಕ್ಷ ಕೈಲಾಸವೆಂದು ಪ್ರಖ್ಯಾತಿ ಪಡೆದ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ (ರಿ) ಇವರ ಸಂಯೋಜನೆಯಲ್ಲಿ ಸುಪ್ರಸಿದ್ಧ ಕಲಾವಿದರು ಮತ್ತು ಅತಿಥಿ ಕಲಾವಿದರ ಸಂಗಮದಲ್ಲಿ ಅಕ್ಟೋಬರ್ 19 ರ ರಾತ್ರಿ 9:30ಕ್ಕೆ ನಡೆಯಲಿದೆ.
ಯಕ್ಷಗಾನ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಈ ಯಕ್ಷಗಾನವನ್ನು ಪ್ರೋತ್ಸಾಹಿಸಲು ಸಂಘಟಕರು ಮನವಿ ಮಾಡಿಕೊಂಡಿದ್ದಾರೆ. ವಿಜಯ ತಲ್ಲೂರು ಮತ್ತು ರಾಜೇಶ್ ಕೊಂಡಳ್ಳಿ ..9900802670, 9353463402
ವರದಿ – ರಾಘವೇಂದ್ರ ಹಾರ್ಮಣ್