ಕುಂದಾಪುರ: ನಗರದ ಶಾಸ್ತ್ರೀ ಸರ್ಕಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಕುಂದಾಪುರದ ಖಾಸಗಿ ಕಾಲೇಜೊಂದರ ಉಪನ್ಯಾಸಕಿಯ ಬ್ಯಾಗ್ ನಿಂದ ಸರಿಸುಮಾರು 48000 ಸಾವಿರ ರೂಪಾಯಿ ನಗದನ್ನು ಮಹಿಳಾ ಗ್ಯಾಂಗ್ ಒಂದು ಕಳ್ಳತನ ಮಾಡಿರುವ ಪ್ರಕರಣ ಫೆಬ್ರವರಿ 6ರ ಮಧ್ಯಾಹ್ನ ಸರಿ ಸಮಾರು 1:15 ಸಮಯಕ್ಕೆ ನಡೆದಿದೆ.
ಈ ಕುರಿತು ಕುಂದಾಪುರದ ಪೊಲೀಸ್ ಠಾಣೆಯಲ್ಲಿ ಸಿ.ಸಿ ಕ್ಯಾಮರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಇಬ್ಬರು ಮಹಿಳೆಯರು ಉಪನ್ಯಾಸಕಿಯನ್ನು ಹಿಂಬಾಲಿಸಿರುವುದು ಖಚಿತವಾಗಿದೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.