ಕುಂದಾಪುರ ( ನ.01): ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಸಮಾಜ ಸೇವಾ ವಿಭಾಗದಲ್ಲಿ ಪ್ರದೀಪ್ ಕುಮಾರ್ ಬಸ್ರೂರು ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮನೆ ಹುಡುಕಿ, ಅವರ ಫೋಟೋ, ಮಾಹಿತಿ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಿ ಅವರ ಮನೆಯವರಿಗೆ ರಾಷ್ಟ್ರಧ್ವಜ ನೀಡಿ, ಮನೆಗೆ ” ಸ್ವಾತಂತ್ರ್ಯ ಹೋರಾಟಗಾರ ರ ಮನೆ ಎನ್ನುವ ನಾಮಫಲಕ ಅಳವಡಿಸುವ ಮಹತ್ವದ ಕಾರ್ಯಕ್ರಮವನ್ನು ಇವರು ನಡೆಸಿದ್ದರು.