ಕುಂದಾಪುರ ( ನ. 09): ಉಡುಪಿ ಜಿಲ್ಲಾ ಮಟ್ಟದ ಅಥ್ಲೆಟಿಕ್ ಚಾಂಪಿಯನ್ಶಿಪ್ ನ 14 ವರ್ಷ ಹುಡುಗರ ವಿಭಾಗದಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಸಂಸ್ಥೆಯ ರೋನಕ್ ರಾಘವೇಂದ್ರ ಖಾರ್ವಿ ಗುಂಡು ಹೆಸರಿನಲ್ಲಿ ಪ್ರಥಮ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸ್ಟೆಲ್ಲಾ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇಲ್ಲಿಯ ವಿದ್ಯಾರ್ಥಿಯಾಗಿರುವ ಈತ ಕುಂದಾಪುರದ ಟ್ರ್ಯಾಕ್ & ಫೀಲ್ಡ್ ಸಂಸ್ಥೆಯ ಪ್ರಶಾಂತ ಶೆಟ್ಟಿ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.