ಕುಂದಾಪುರ: ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ, ಆದರ್ಶ ಆಸ್ಪತ್ರೆ ಕುಂದಾಪುರ, ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ಜೈ ಕುಂದಾಪುರ ಸೇವಾ ಟ್ರಸ್ಟ್(ರಿ) ಹಾಗೂ ಇಂಡಿಯನ್ ರೆಡ್ ಕ್ರಾಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪುಲ್ವಾಮ ದಾಳಿಯಲ್ಲಿ ಮೃತರಾದ ವೀರಯೋಧರ ಸ್ಮರಣಾರ್ಥ ಫೆಬ್ರವರಿ 14ರಂದು ಆದರ್ಶ ಆಸ್ಪತ್ರೆ ಕುಂದಾಪುರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಫೆಬ್ರವರಿ 14ರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ (ನಿ) ಮಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀ ಯಶ್ ಪಾಲ್.ಎ. ಸುವರ್ಣ ರಕ್ತದಾನ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಆದರ್ಶ ಆಸ್ಪತ್ರೆ ಕುಂದಾಪುರ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಆದರ್ಶ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾಗಿರುವ ಡಾ. ನಾಗೇಶ್ ಮಾತೃಶ್ರೀ ಸೇವಾ ಸಂಘ ಮಣಿಪಾಲ ಇದರ ಪ್ರವರ್ತಕ ರಾಗಿರುವ ಡಾ. ಬಳ್ಕೂರು ಗೋಪಾಲ ಆಚಾರ್ಯ, ಮೊಗವೀರ ಯುವ ಸಂಘಟನೆ(ರಿ) ಉಡುಪಿ ಇದರ ಜಿಲ್ಲಾಧ್ಯಕ್ಷರಾಗಿರುವ ಶಿವರಾಮ ಕೋಟ, ಉದ್ಯಮಿ ವಸಂತ್ ಕುಮಾರ್ ಬೆಳ್ವೆ, ಬೀಜಾಡಿ- ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯರಾಗಿರುವ ವಿಶ್ವನಾಥ ಮೊಗವೀರ, ಮನೋಜ್ ಪುತ್ರನ್ ಮಲ್ಪೆ , ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ಇದರ ಸಂಸ್ಥಾಪಕ ರಕ್ತದಾನಿ ಸತೀಶ್ ಸಾಲಿಯಾನ್ ಮಣಿಪಾಲ್, ಸಹಸಂಸ್ಥಾಪಕ ರಾಜೇಶ್ ಮೆಂಡನ್ ಇನ್ನಿತರರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಯೋಧ ಶ್ರೀ ಕರುಣಾಕರ ಗಾಣಿಗ ಕೋಟೇಶ್ವರ, ರಕ್ತದಾನಿ ಸುರೇಂದ್ರ ಕಾಂಚನ್ ಸಂಗಮ್, ಜೈ ಕುಂದಾಪುರ ಸೇವಾ ಟ್ರಸ್ಟ್ (ರ) ಇದರ ಸ್ಥಾಪಕ ಅಧ್ಯಕ್ಷರಾಗಿರುವ ಪುಂಡಲೀಕ ಮೊಗವೀರ, ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.