ಕುಂದಾಪುರ(ಜ. 18): ಇಲ್ಲಿನ ನಾಡದ ಶ್ರೀ ಹಾಡಿಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ- ಗೆಂಡಸೇವೆ, ಮಹಾ ಅನ್ನಸಂತರ್ಪಣೆ ಜನವರಿ 14 ಮತ್ತು 15ರಂದು ಬಹಳ ವಿಜೃಂಭಣೆಯಿಂದ ಜರುಗಿತು.
ಜ.14 ರ ಬೆಳಿಗ್ಗೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಕೊಡಗುಂಜಿ ಕಳುವಿನ ಬಾಗಿಲುವಿನಲ್ಲಿ ಮೂಲಸ್ಥಾನ ಸ್ವಾಮಿ ಪೂಜೆ. ನಾಗ ಸನ್ನಿಧಿಯಲ್ಲಿ ಪೂಜೆ, ನಾಗದರ್ಶನ, ಮಹಾಮಂಗಳಾರತಿ, ದೈವದರ್ಶನ, ಗೆಂಡಸೇವೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಹಾಡಿಗರಡಿ ಶ್ರೀ ನಂದಿಕೇಶ್ವರ ಮಕ್ಕಳ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಪ್ರಾಂಜಲಿ ಎಸ್ ಪಡುಕೋಣೆ ಮತ್ತು ಪ್ರಾಂಜಲ್ ಸದಾನಂದ ಬಳ್ಳೂರು ಇವರಿಂದ ಭರತನಾಟ್ಯ, ಸತೀಶ ಎಂ.ನಾಯಕ್ ನಾಡ ಮತ್ತು ತಂಡದವರಿಂದ ಗಿಂಡಿ ನರ್ತನ ನಡೆಯಿತು.ರಾತ್ರಿ 9 ಗಂಟೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ನಡೆಯಿತು.
ಶ್ರೀ ಹಾಡಿಗರಡಿ ದೈವಸ್ಥಾನ ಸಮಿತಿಯ ಅಧ್ಯಕ್ಷ ನಾಗೇಶ್ ಪಿ.ಕಾಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ರತ್ನ ಫೌಂಡೇಶನ್ ಪ್ರವರ್ತಕರಾದ ಬಸವರಾಜ್ ಕುದ್ರಿಸಾಲು ನಾಡ ಪ್ರತಿಭಾಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಿದರು.
ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಿರೀಶ್ ಭಟ್ ಶುಭಶಂಸನೆಗೈದರು.
ಮುಖ್ಯ ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ನಾಡ ಕಡಿಕೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಸಂಸಾಡಿ, ಪಡುಕೋಣೆ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ರಾಮ ಪೂಜಾರಿ,ಅನ್ನಸಂತರ್ಪಣೆಯ ಸೇವಾಕರ್ತರಾದ ಉದ್ಯಮಿ ಮಹೇಶ್ ಎನ್., ಕಾಂಚನ್ ನಾವುಂದ, ಮೊಗವೀರ ಯುವ ಸಂಘಟನೆ(ರಿ.), ಉಡುಪಿ ಇದರ ಮಾಜಿ ಅಧ್ಯಕ್ಷ ಸದಾನಂದ ಬಳ್ಳೂರು, ಸತೀಶ್ ಎಂ ನಾಯಕ್,ಹೆಮ್ಮಾಡಿ ಘಟಕದ ಅಧ್ಯಕ್ಷ ದಿನೇಶ ಕಾಂಚನ್ ಬಾಳಿಕೆರೆ , ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಉಪೇಂದ್ರ ಪ್ರಭು, ಪ್ರಭಾಕರ ಸೇನಾಪುರ ಉಪಸ್ಥಿತರಿದ್ದರು.
ನಾಡ ಗುಡ್ಡೆಯಂಗಡಿ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಉಪೇಂದ್ರ ಪ್ರಭು ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಉದಯ ಕುಮಾರ್ ಹಟ್ಟಿಯಂಗಡಿಯವರನ್ನು ಸಮಿತಿ ವತಿಯಿಂದ ಸನ್ಮಾನಿಸಿಲಾಯಿತು.ಚಂದ್ರಕಾಂತ ರತ್ನ ಫೌಂಡೇಶನ್ (ಸಿ.ಆರ್.ಎಫ್) ನಾಡ ಇವರ ಸಹಯೋಗದೊಂದಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಪ್ರಭಾಕರ ಸೇನಾಪುರ ಸ್ವಾಗತಿಸಿದರು. ವಿಜಯ ಕಾಂಚನ್ ನಾಡ ವಂದಿಸಿದರು. ಕಾರ್ಯಕ್ರಮದ ನಂತರ ಬ್ಲೂಸ್ಯೆ ಇವೆಂಟ್ಸ್ ಕುಂದಾಪುರ ಇವರ ಸಾರಥ್ಯದಲ್ಲಿ ಸಾಂಸ್ಕೃತಿಕ ಸಂಭ್ರಮ ನಡೆಯಿತು.
ಜನವರಿ 15ರ ಬೆಳಿಗ್ಗೆ ಹಣ್ಣುಕಾಯಿ ಸಮರ್ಪಣೆ, ಮಂಗಳಾರತಿ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ,ರಾತ್ರಿ ಮಹಾಪೂಜೆ, ಮಂಗಳಾರತಿ, ಸರ್ವ ದೈವಗಳ ದರ್ಶನ ಸೇವೆ, ಹೂ ಸಮರ್ಪಣೆ, ಬಲಿಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು.