ಮಧುವನ, (ಫೆಬ್ರವರಿ 12) : ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್, ಮಧುವನ ಇಲ್ಲಿನ ರೆಡಿಕ್ರಾಸ್ ಘಟಕ ಮತ್ತು ಸಂಜೀವಿನಿ, ಎನ್ ಜಿ ಒ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 10-02-2021 ರಂದು “ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಆರೋಗ್ಯಕರ ಜೀವನಶೈಲಿಯ ಪಾತ್ರ ” ಎಂಬ ವಿಷಯದ ಕುರಿತು ವೆಬಿನಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಜೀವಿನಿ ಸಂಸ್ಥೆಯ ಸ್ಥಾಪಕರಾದ ಕುಮಾರಿ ರೂಬಿ ಅಹ್ಲುವಾಲಿಯಾ ಅವರು ಸಂಸ್ಥೆಯ ಉದ್ದೇಶವನ್ನು ಪರಿಚಯಿಸಿದರು. ಸಂಸ್ಥೆಯ ಸಂಯೋಜಕರು ಹಾಗೂ ಸಮಾಲೋಚಕರಾದ ಕುಮಾರಿ ಸುಮ್ಕಿ ಬೇಗಮ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕ್ಯಾನ್ಸರ್ ವಿಧಗಳು, ಆಧುನಿಕ ಜೀವನ ಶೈಲಿ ಆರೋಗ್ಯಕ್ಕೆ ಮಾರಕವಾಗುವ ಬಗ್ಗೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಕ್ಯಾನ್ಸರನ್ನು ತಡೆಗಟ್ಟುವುದು ಹೇಗೆ ಎನ್ನುವುದರ ಕುರಿತು ಮಾತನಾಡಿದರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವೆಬಿನಾರ್ನಲ್ಲಿ ಪಾಲ್ಗೊಂಡವರಿಗೆ ಕಾರ್ಯಕ್ರಮದ ಕುರಿತು ಪ್ರಶ್ನೆಗಳನ್ನು ಕೇಳಿ ವಿಜೇತರಾದವರಿಗೆ ಬಹುಮಾನಗಳನ್ನು ಘೋಷಿಸಿದರು. ಕುಮಾರಿ ಜಾನ್ಹವಿ ಅಂತಿಮ ವರ್ಷದ ಬಿ ಸಿ ಎ ಪ್ರಥಮ, ಕುಮಾರಿ ರಚನಾ ಅಂತಿಮ ವರ್ಷದ ಬಿ ಬಿ ಎ ದ್ವಿತೀಯ, ಕುಮಾರಿ ಪ್ರೀತು ಕೆ ಅಂತಿಮ ವರ್ಷದ ಬಿ ಸಿ ಎ ತೃತೀಯ ಸ್ಥಾನವನ್ನು ಪಡೆದುಕೊಂಡರು. ಪ್ರಾಂಶುಪಾಲರಾದ ಶ್ರೀ ಆಕಾಶ್ ಸವಳಸಂಗ್, ಏವಿಯೇಷನ್ ವಿಭಾಗ ಮುಖ್ಯಸ್ಥರಾದ ಶ್ರೀ ಮಿರ್ ತಾಜದಾರ್ ಹುಸೇನ್, ಉಪಪ್ರಾಂಶುಪಾಲೆ ಶ್ರೀಮತಿ ಚಂದ್ರಕಲಾ ಎಸ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ರೆಡಿಕ್ರಾಸ್ ಘಟಕದ ಅಧಿಕಾರಿಯಾದ ಕುಮಾರಿ ಶ್ರೀನಿಧಿ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಂಯೋಜಕಿ ಶ್ರೀಮತಿ ಕುಸುಮಾವತಿ ಐ ವಂದಿಸಿದರು.