ಕುಂದಾಪುರ, (ಫೆಬ್ರವರಿ 12) : ರಸ್ತೆ ಅಪಘಾತದಲ್ಲಿ ಯುವಜನತೆಯೇ ಹೆಚ್ಚು ಸಾವಿಗೀಡಾಗುತ್ತಿರುವುದು ವಿಷಾದನೀಯ. ರಸ್ತೆಯ ಸಾಮಾನ್ಯ ನಿಯಮಗಳಾದ ಹೆಲೈಟ್, ಸೀಟ್ಬೆಲ್ಟ್ ಧರಿಸುವುದು,ವೇಗದ ಮಿತಿ ಕಡಿಮೆಗೊಳಿಸುವುದು ಇಂತಹ ಸರಳ ನಿಯಮಗಳ ಮೂಲಕ ಅಮೂಲ್ಯವಾದ ಜೀವನ ರಕ್ಷಣೆಯಾಗಬೇಕು ಎಂದು ಕುಂದಾಪುರ ಸಂಚಾರಿ ಪೊಲೀಸ್ ಅಧಿಕಾರಿಯಾದ ಶ್ರೀ ಸುದರ್ಶನ್ ಡಿ.ಎನ್ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಯೋಜನಾ ಘಟಕ ಆಯೋಜಿಸಿದ “ರಸ್ತೆ ಸುರಕ್ಷತಾ ಜಾಗೃತಿ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪೊಲೀಸ್ ಉಪನಿರೀಕ್ಷಕ, ಶ್ರೀ ಸದಾಶಿವ ಗವರೋಜಿ ಹಾಗೂ ಪೋಲೀಸ್ ಸಿಬ್ಬಂದಿ ಶ್ರೀ ನವೀನ್ ಸಂಚಾರಿ ನಿಯಮಗಳ ಪಾಲನೆಯ ಅಗತ್ಯತೆಯ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಎನ್.ಎಸ್.ಎಸ್. ಯೋಜನಾ ಧಿಕಾರಿಯಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಸುಕುಮಾರ ಶೆಟ್ಟಿ ವಂದಿಸಿದರು. ಎನ್.ಎಸ್.ಎಸ್. ಸಹ ಯೋಜನಾಧಿಕಾರಿಯಾದ ಶ್ರೀಮತಿ ರೇಷ್ಮಾ ಶೆಟ್ಟಿ ನಿರೂಪಿಸಿದರು.