ಅoಪಾರು(ಜು,19): ಸೇವಾ ಚೇತನ ಟ್ರಸ್ಟ್ (ರಿ) ಮೂಡುಬಗೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಬಾಳ್ಕಟ್ಟು ಮೂಡುಬಗೆ ಇವರ ಮುತುವರ್ಜಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಶಿಲನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.


ಸಾವಿರಾರು ವರ್ಷಗಳ ಇತಿಹಾಸವುಳ್ಳ ದೇವಾಲಯ ಶಿಥಿಲಾವಸ್ಥೆಯಿಂದ ಜೀರ್ಣೋದ್ದಾರಕ್ಕೆ ಸಿದ್ದವಾಗಿದೆ. ಲಯಕಾರಕನಾದ ಮಹಾದೇವನ ಮಂದಿರ ಮರಳಿ ಲಯಕ್ಕೆ ಬರುತ್ತಿದೆ. ದೇವಾಲಯಕ್ಕೊಂದು ಕಲೆ ಕೊಡುವುದೆಂದರೆ ಇಡೀ ಊರಿಗೆ ಚೈತನ್ಯ ಕೊಟ್ಟ ಹಾಗೆ .ಸಮಗ್ರ ಗ್ರಾಮದ ಅಬ್ಯುದಯದ ಆಕಾಂಕ್ಷೆಯಿಂದ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಮೂಡುಬಗೆ ಬಾಳ್ಕಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿರ್ಮಾಣದ ಕಾರ್ಯಕ್ರಮವು ಸೇವಾ ಚೇತನ ಟ್ರಸ್ಟ್ ಮೂಡುಬಗೆ ಹಾಗೂ ಊರಿನ ಗ್ರಾಮಸ್ಥರ ಸಹಕಾರದಿಂದ ಬರದಿಂದ ಸಾಗುತ್ತಿದೆ.

ಶಿಲನ್ಯಾಸ ಕಾರ್ಯಕ್ರಮ ನೂರಾರು ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥಗಳಿಗೆ ಆಧಾರವಾಗಿ ಅರ್ಥ ವ್ಯವಸ್ಥೆ ಮಾಡಿದ ಕೃಷ್ಣಮೂರ್ತಿ ಮಂಜರ ಅಮೃತ ಹಸ್ತದಿಂದ ಅಮೃತೇಶ್ವರನಾದ ಮಹಾಲಿಂಗೇಶ್ವರನ ಆಲಯದ ಶಿಲನ್ಯಾಸ ಕಾರ್ಯಕ್ರಮ ಜರುಗಿತು. ವೇದ ಮೂರ್ತಿ ತಟವಟ್ಟು ವಾಸುದೇವ ಜೊಯಿಸರ ಮುಂದಾಳತ್ವದಲ್ಲಿ ಈ ದಿನ ಬೆಳಿಗ್ಗೆ ಬಾಳ್ಕಟ್ಟು ದೇವಸ್ಥಾನ ನಿರ್ಮಾಣದ ಪ್ರದೇಶದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಶ್ರೀಯುತ ಗುರುರಾಜ್ ಗಂಟಿ ಹೊಳೆ,ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಸುಬ್ರಹ್ಮಣ್ಯ ಯಡಿಯಾಳ, ರಾಜೀವ ಶೆಟ್ಟಿ ಶಾನ್ಕಟ್ಟು, ಸಮಿತಿಯ ಅಧ್ಯಕ್ಷರಾದ ಶ್ರೀಯುತ ಅರುಣ್ ಕುಮಾರ್ ಶೆಟ್ಟಿ ಕಂಚಾರು, ಗ್ರಾಮ ಪಂಚಾಯತ್ನ ಪ್ರಥಮ ಪ್ರಜೆ ಶ್ರೀಯುತ ಗೋಪಾಲಕೃಷ್ಣ ಕಿಣಿ, ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರದೀಪ್ ಕುಮಾರ್ ಶೆಟ್ಟಿ, ಸೇವಾ ಚೇತನ ಟ್ರಸ್ಟ್ ನ ಗೌರವಾಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಹೊಸಮನೆ, ಗ್ರಾಮ ಪಂಚಾಯಿತಿನ ಸದಸ್ಯರುಗಳಾದ ಕಿರಣ್ ಹೆಗ್ಡೆ ಅಶೋಕ್ ನಾಯ್ಕ್, ನವೀನ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದು ಶುಭಾಶಯಗಳನ್ನು ಕೋರಿದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮನೋಹರ್ ಶೆಟ್ಟಿ, ಶುಂಠಿ ಹಕ್ಲು ಇವರು ಆಗಮಿಸಿರುವ ಎಲ್ಲರನ್ನ ಗೌರವ ಪೂರ್ವಕವಾಗಿ ಸ್ವಾಗತಿಸುವುದರ ಮೂಲಕ ಧನ್ಯವಾದ ಸಮರ್ಪಣೆ ಮಾಡಿದರು.










