ಕುಂದಾಪುರ(ಜುಲೈ 18) : ಕುಂದಾಪುರ ಎಜುಕೇಶನ್ ಸೊಸೈಟಿ ( ರಿ. )ಪ್ರವರ್ತಿತ ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗಳು, ಈಶಾನ್ಯ ಇಂಡಿಯನ್ ಫೌಂಡೇಶನ್ ಬೆಂಗಳೂರು ಮತ್ತು ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಕರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಮನೆಯು ಕಲಿಕೆಗೆ ಪೂರಕವಾದ ವಾತಾವರಣವಾಗಿರಬೇಕು. ಪೋಷಕರು ಮಗುವಿನ ಭಾವನೆಗಳಿಗೆ ಸ್ಪಂದಿಸಿ ಅವರಿಗೆ ಬೆನ್ನೆಲುಬಾಗಿ ಪ್ರತಿಯೊಂದು ಚಟುವಟಿಕೆಯಲ್ಲಿ ಸಹಕರಿಸಬೇಕು ಎಂದು ಡಾ. ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಅವರು ಹೇಳಿದರು.

ಹಾಗೆಯೇ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಈಶಾನ್ಯ ಇಂಡಿಯಾ ಫೌಂಡೇಶನ್ ಸ್ಥಾಪಕರು, ನಿರ್ದೇಶಕರಾಗಿರುವ ಸ್ವಾತಿ ವೆಲ್ಲಾಲ್ ರವರು ಪೋಷಕರು ಯಾವುದೇ ಸನ್ನಿವೇಶದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳದೆ ಮಕ್ಕಳ ಮಾತುಗಳಿಗೆ ಅವಕಾಶ ನೀಡಿ,ಅವರಲ್ಲಿರುವ ಭಯಭೀತಿಯನ್ನು ಹೋಗಲಾಡಿಸಿ ಎಂದಿನಂತೆ ತನ್ನ ಕಾರ್ಯಾಚರಣೆಯಲ್ಲಿ ತೊಡಗಲು ಸಹಕರಿಸಿ ಎಂದು ತಿಳಿಸಿದರು.

ಈಶಾನ್ಯ ಇಂಡಿಯಾ ಫೌಂಡೇಶನ್ ಕಾರ್ಯಕ್ರಮದ ಸಂಯೋಜಕರಾದ ಅನುಪ್ ಸಿಂಹರವರು ಕಲಿಕಾ ನ್ಯೂನತೆ ಮತ್ತು ಬುದ್ಧಿ ಮಟ್ಟಕ್ಕೆ ಇರುವ ಸಂಬಂಧದ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಆಟಿಸಂ ಸೊಸೈಟಿ ಉಡುಪಿಯ ಕೀರ್ತೇಶ್ ಆಗಮಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ರವರು, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ರವಿಚಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











