ಉಳ್ಳಾಲ (ಆ,09): ಧರ್ಮವನ್ನು ಇಂದು ವಿವಿಧ ಅರ್ಥದಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಆದರೆ ಧರ್ಮದ ಮೂಲವನ್ನು ಹುಡುಕುತ್ತಾ ಹೋದರೆ ನಮಗೆ ಸತ್ಯದ ಅರಿವಾಗುತ್ತದೆ. ದಯೆಯೇ ಧರ್ಮದ ಮೂಲ ವೆಂದು ಬಸವಣ್ಣನವರು ಶತಶತಮಾನದ ಹಿಂದೆ ಹೇಳಿದ್ದಾರೆ. ಆ ನಿಟ್ಟಿನಲ್ಲಿ ದಯೆಯಿಂದ ಕೂಡಿದ ಮಾನವತಾ ಧರ್ಮವೇ ಶ್ರೇಷ್ಠ ಎಂದು ಮೊಗವೀರ ಮಹಾಜನ ಸೇವಾ ಸಂಘ( ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಇದರ ಅಧ್ಯಕ್ಷರು ಸಹಕಾರಿ ರತ್ನ ಹಾಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಉದಯ್ ಕುಮಾರ್ ಹಟ್ಟಿ ಅಂಗಡಿ ಅವರು ಹೇಳಿದರು.


ಅವರು ಆಗಸ್ಟ್ 08 ರಂದು ಮಂಗಳೂರಿನ ಉಳ್ಳಾಲದ ಧರ್ಮರಕ್ಷಣಾ ಮೊಗವೀರ ವೇದಿಕೆ ಹಮ್ಮಿಕೊಂಡ 12ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀ ಉದಯ್ ಕುಮಾರ್ ಹಟ್ಟಿ ಅಂಗಡಿ ಹಾಗೂ ಶ್ರೀಮತಿ ಸುಮತಿ ದಂಪತಿಗಳಿಗೆ ವೇದಿಕೆ ವತಿಯಿಂದ ಗೌರವಿಸಲಾಯಿತು.
ಧರ್ಮರಕ್ಷಣಾ ಮೊಗವೀರ ವೇದಿಕೆಯ ಸ್ಥಾಪಕರಾದ ಮನೋಜ್ ಉಳ್ಳಾಲ್ ,ಹಿರಿಯರಾದ ಸದಾನಂದ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.













