ಕುಂದಾಪುರ(ಆ,09): ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಶಕ್ತಿಕ್ಷೇತ್ರಗಳಲ್ಲಿ ಒಂದಾದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತ ವಿಜೃoಭಣೆಯಿ೦ದ ನಡೆಯಿತು.

ಭಕ್ತಾದಿಗಳಿಗೆ ಸಾಮೂಹಿಕವಾಗಿ ಶ್ರೀ ವರಮಹಾಲಕ್ಷ್ಮೀಯ ಪೂಜೆಯ ಅವಕಾಶ ಕಲ್ಪಿಸಲಾಗಿತ್ತು. ಕ್ಷೇತ್ರದ ಪ್ರಧಾನ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ 2500ಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸೇವಿಸಿದರು.

ಶ್ರೀಮಹಿಷಾಸುರಮರ್ದಿನಿ ದೇವಸ್ಥಾನ ಬಗ್ವಾಡಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬೈ ಇದರ ಕುಂದಾಪುರ ಶಾಖೆಯ ಅಧ್ಯಕ್ಷ ಶ್ರೀ ಉದಯ ಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಪ್ರಭಾಕರ ಮೊಗವೀರ ಸೇನಾಪುರ, ಮಾಜಿ ಶಾಖಾಧ್ಯಕ್ಷರುಗಳು, ಪದಾಧಿಕಾರಿಗಳು, ಬಗ್ವಾಡಿ ಹೋಬಳಿ ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷರು, ಪದಾಧಿಕಾರಿಗಳು, ಬಗ್ವಾಡಿ ಹೋಬಳಿ ವ್ಯಾಪ್ತಿಯ ಮೊಗವೀರ ಯುವ ಸಂಘಟನೆಯ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯರು ಹಾಗೂ ದೇವಸ್ಥಾನದ ಸಿಬ್ಬಂದಿಗಳು ಉಪಸ್ಥಿತರಿದ್ದರು.










