ಹೊಸಂಗಡಿ(ಆ,21): 79ನೇ ಸ್ವಾತಂತ್ರ್ಯೋತ್ಸವವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ ಹೊಸಂಗಡಿ ಇಲ್ಲಿ ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಜಾಥ, ಜಾಗೃತಿ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಹೊಸಂಗಡಿ ಗ್ರಾಮ ಪಂಚಾಯತ್ ನ ಪ್ರಥಮ ಪ್ರಜೆ, ಅಧ್ಯಕ್ಷರಾದ ಶ್ರೀಮತಿ ಶಾಂತಿ ನಾಯಕ್ ಇವರು ಧ್ವಜಾರೋಹಣಗೈದು ಮಕ್ಕಳಿಗೆ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ಶಾರದ ನಾಯಕ್ ಸದಸ್ಯರಾದ ಶ್ರೀಯುತ ಅವಿನಾಶ್ ರವರು ಉಪಸ್ಥಿತರಿದ್ದರು.

ಕಾಲೇಜಿನಿಂದ ಹೊಸಂಗಡಿ ಚೆಕ್ ಪೋಸ್ಟ್ ಸರ್ಕಲ್ ನ ತನಕ ವಂದೇ -ಮಾತರಂ, ಹಮ್ -ಸಬ್ಏಕ್ ಹೇ, ಕಣಕಣ ರಕ್ತವು ಕುದಿಯುತಿದೆ -ದೇಶ ದೇಶ ಎನ್ನುತ್ತಿದೆ…ಇನ್ನೂ ಹಲವು ಘೋಷಣೆಗಳನ್ನು ಕೂಗುತ್ತಾ,, ಹರಘರ್ ತಿರಂಗದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ ಜಾಥ ನಡೆಸಲಾಯಿತು .
ಸಭಾ ಕಾರ್ಯಕ್ರಮದಿ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಪೋಲಿಸ್ ಉಪನಿರೀಕ್ಷಕರು, ಶ್ರೀಯುತ ಚಂದ್ರು ಮತ್ತು ಪೋಲಿಸ್ ಸಹ ಉಪನಿರೀಕ್ಷಕರು ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಪೋಲಿಸ್ ಉಪನಿರೀಕ್ಷಕರಾದ, ಶ್ರೀಯುತ ಚಂದ್ರುರವರು ಮಾತನಾಡಿ ಸ್ವಾತಂತ್ರ್ಯ , ಸ್ವಾತಂತ್ರ್ಯದ ಮಹತ್ವ ಸ್ವಾತಂತ್ಯ ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ಅರಿತು ನಡೆದರೆ ಮಾತ್ರ ನೈಜವಾದ ಸ್ವಾತಂತ್ರ್ಯ ದಿನಾಚರಣೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಅರಿವನ್ನು ಹೆಚ್ಚಿಸುವ ಸಲುವಾಗಿ ವಿವಿದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ನನ್ನ ದೇಶ ನನ್ನ ಹೆಮ್ಮೆ ಭಾಷಣ ಸ್ಪರ್ಧೆ, ದೇಶಭಕ್ತಿ ಗೀತೆ, ಸಮೂಹಗಾನ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು.ಉಪನ್ಯಾಸಕ ವೃಂದದವರೆಲ್ಲ ಸ್ವತಂತ್ರ ಭಾರತದ ಪರಿಕಲ್ಪನೆ ಮತ್ತು ಇಂದಿಗೆ ಅದರ ಪ್ರಸ್ತುತತೆಯ ಕುರಿತು ಮಕ್ಕಳಿಗೆ ಹಿತನುಡಿಗಳನ್ನು ನುಡಿದರು.
ಪ್ರಾಂಶುಪಾಲರಾದ ಶ್ರೀಯುತ ರಣಜಿತ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ದೇಶಭಕ್ತಿ ಎನ್ನುವುದು ಕೇವಲ ಆಚರಣೆಯಾಗಿರದೆ, ಪ್ರತಿ ವಿದ್ಯಾರ್ಥಿಯ ಕಣಕಣದಲ್ಲೂ ಮೂಡಿ ಬರಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಸ್ಮರಣೆ ಮಾಡುವುದರ ಜೊತೆಗೆ, ಅದರ ಸಾಫಲ್ಯ ನಾವು ಸಫಲತೆಯಿಂದ ಆಚರಿಸಿದಾಗ, ಅಳವಡಿಸಿಕೊಂಡಾಗ ಮಾತ್ರ ಎಂದು ತಿಳಿಸಿದರು.

ಸಮಾಜಶಾಸ್ತ್ರ ಉಪನ್ಯಾಸಕಿ ಕು. ರಾಜೇಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಕು. ವಿಸ್ಮಯ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಶ್ರೀಮತಿ ವೈಶಾಲಿ ಹೆಬ್ಬಾರ್ ವಂದಿಸಿದರು.









