ಕುಂದಾಪುರ (ಆ. 25): ದೀಕ್ಷಿತ್ ಕೆ ಅವರು ಮಂಡಿಸಿದ ಡಿಸೈನ್ ಆಫ್ ಮೈಕ್ರೋಫ್ಲೋಯಿಡಿಕ್ ನೆಟ್ವರ್ಕ್ಸ್ ವಿದ್ ಅಪ್ಲಿಕೇಶನ್ టు ರೋಬಸ್ ಕೆಮಿಕಲ್ ಗ್ರೇಡಿಯೆಂಟ್ ಜನರೇ ಷನ್ ಆ್ಯಂಡ್ ಪ್ಯಾಸಿವ್ ಫೋ ಕಂಟ್ರೋಲ್’ ಮಹಾ ಪ್ರಬಂಧಕ್ಕೆ ಐಐಟಿ ಬಾಂಬೆ ಪಿಎಚ್.ಡಿ ಪ್ರದಾನ ಮಾಡಿದೆ.

ಐಐಟಿ ಬಾಂಬೆಯ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಸಮೀರ್ ಜಾಧವ್ ಮಾರ್ಗದರ್ಶನದಲ್ಲಿ ಡಾ.ದೀಕ್ಷಿತ್ ರವರು ಸಂಶೋಧನೆ ನಡೆಸಿದ್ದರು. ಇವರು ಈ ಹಿಂದೆ ಬಯೋಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ ದಲ್ಲಿ ಎಂ. ಟೆಕ್ ಪದವಿ ಪಡೆದಿರುತ್ತಾರೆ.

ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಾವ್ರಾಡಿ ಕಲ್ಲೋಳಿ ಮನೆ ಕೆ. ವಿ. ಬಾಲಚಂದ್ರ ಶೆಟ್ಟಿ (ನಿವೃತ್ತ ಶಿಕ್ಷಕರು) ಮತ್ತು ಬೈಲೂರು ಹೆಬ್ಬಾಗಿಲುಮನೆ ಜಯಲಕ್ಷ್ಮಿ ಬಿ ಶೆಟ್ಟಿ ರವರ ಸುಪುತ್ರ.












