ಕುಂದಾಪುರ(ಸೆ.13): ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 12 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಖೋ-ಖೋ ಪಂದ್ಯಾಟ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಯವರು ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧರು. ಶ್ರೀ ಮೋಹನದಾಸ ಶೆಣೈ – ಅಧ್ಯಕ್ಷರು ಪುರಸಭೆ ಕುಂದಾಪುರ ಹಾಗೂ ಶ್ರೀ ಕೆ.ಆರ್ ನಾಯ್ಕ – ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಕುಂದಾಪುರ ಜ್ಯೋತಿ ಬೆಳಗಿಸುವುದರ ಮೂಲಕ ಪಂದ್ಯಾಟ ಉದ್ಘಾಟಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಕಿರಣ ಹೆಗ್ಡೆ-ಉಪಪ್ರಾಂಶುಪಾಲರು ಸ.ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗ ಕುಂದಾಪುರ, ಶ್ರೀ ರಾಮ ಶೆಟ್ಟಿ – ತಾಲೂಕು ಕ್ರೀಡಾ ಸಂಚಾಲಕರು ಆಗಮಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಸೀತಾರಾಮ ನಕತ್ತಾಯ, ಶ್ರೀ ನಾರಾಯಣ, ಶ್ರೀ ಬಾಲಕೃಷ್ಣ ಭಟ್ – ಪ್ರಾಂಶುಪಾಲರು ಸ.ಪ.ಪೂ ಕಾಲೇಜು ಹಾಲಾಡಿ, ಶ್ರೀ ಜೀವನ್ ಕುಮಾರ್ ಶೆಟ್ಟಿ – ಗೌರವ ಅಧ್ಯಕ್ಷರು, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ಶ್ರೀ ಹುಸೇನ್ ಐಕ್ಯಾಡಿ – ಕುಂದಾಪುರ ಸಿಟಿ ಜೆ.ಸಿ.ಐ ಸ್ಥಾಪಕ ಅಧ್ಯಕ್ಷರು ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಿದರು.

ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಶ್ರೀಮತಿ ಪೂರ್ಣಿಮಾ ಪಿ ನಾಯಕ್ ಸ್ವಾಗತಿಸಿದರು, ಶ್ರೀ ಶಿವಾನಂದ ನಾಯಕ್ ವಂದಿಸಿದರು. ಕಾಳಾವರ ಶ್ರೀ ಉದಯ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದ ಹುಡುಗರ ಮತ್ತು ಹುಡುಗಿಯರ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಲಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹುಡುಗರ ಮತ್ತು ಹುಡುಗಿಯರ ತಂಡ ದ್ವಿತೀಯ ಸ್ಥಾನ ಗಳಿಸಿರುತ್ತಾರೆ










