ಗಂಗೊಳ್ಳಿ (ಸೆ .15): ವಿದ್ಯಾರ್ಥಿಗಳು ಪಠ್ಯದ ಜೊತೆ ವ್ಯವಹಾರ ಜ್ಞಾನ ಮತ್ತು ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಇದು ಅತಿ ಮುಖ್ಯವಾಗುತ್ತದೆ ಎಂದು ಉದ್ಯಮಿ ವಿಠ್ಠಲ ಬಿ ಶಣೈ ಅಭಿಪ್ರಾಯಪಟ್ಟರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎಸ್.ವಿ. ಕಾಮರ್ಸ್ ಕ್ಲಬ್ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿಯ ಉದ್ಯಮಿ ರೋಷನ್ ಖಾರ್ವಿ ಎಸ್. ವಿ ಕಾಮರ್ಸ್ ಕ್ಲಬ್ ಲಾಂಛನವನ್ನು ಬಿಡುಗಡೆಗೊಳಿಸಿದರು.ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪಿ ಪೈ ಮತ್ತು ಮುಖ್ಯ ಅತಿಥಿ ಪತ್ರಕರ್ತ ಬಿ ರಾಘವೇಂದ್ರ ಪೈ ಶುಭ ಹಾರೈಸಿದರು. ಎಸ್. ವಿ.ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್ ಗಂಗೊಳ್ಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಬಿಸಿಯೂಟ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಾದ ಜಲಜ ಪೂಜಾರಿ, ಪದ್ಮಾವತಿ, ಶಾರದ ಗಾಣಿಗ, ದೀಪ ಖಾರ್ವಿ ಮತ್ತು ಜ್ಯೋತಿ ಖಾರ್ವಿ ಯವರನ್ನು ಸನ್ಮಾನಿಸಲಾಯಿತು. ಕಾಮರ್ಸ್ ವಿಭಾಗದ ವಿದ್ಯಾರ್ಥಿ ಸಾಧಕರಾದ ಧನ್ಯ ಯು, ಅಲ್ಮಿರ್ ಹಾಗು ಪ್ರಜ್ವಲ್ ಪೈ ಅವರನ್ನು ಅಭಿನಂದಿಸಲಾಯಿತು.
ಸಿಂಧು, ಮೆಹಕ್, ಪ್ರಥ್ವಿ ಅತಿಥಿ ಗಳನ್ನು ಮತ್ತು ಗೌತಮಿ ಜಿ ನಾಯಕ್ ಸನ್ಮಾನಿತರನ್ನು ಪರಿಚಯಿಸಿದರು. ದೀಪಾಲಿ ಪ್ರಾರ್ಥಿಸಿದರು.ದಿಯಾ ಜಿ ಪೈ ಸ್ವಾಗತಿಸಿದರು. ಶರ್ವಾನಿ. ಎಸ್ ಪೈ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೇಷ್ಠ ಮೇಸ್ತ ವಂದಿಸಿದರು.












