ಕುಂದಾಪುರ (ಸೆ.15): ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಯೋಗಾಸನ ಭಾರತ್ ಹಮ್ಮಿಕೊಂಡ 2025-26 ನೇ ಸಾಲಿನ 6ನೇ ರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ಛತ್ತೀಸ್ ಘಡ ಅಗ್ರಸೇನ್ ಭವನದಲ್ಲಿ ನಡೆದ್ದಿದ್ದು ಬ್ಯಾಕ್ ಬೆಂಡಿಂಗ್ ಯೋಗಾಸನದಲ್ಲಿ ಕುಂದಾಪುರ ತಾಲೂಕಿನ ತ್ರಾಸಿ ಪಂಚಾಯತ್ ಸಿಬ್ಬಂದಿ ಸಂದೀಪ್ ಪೂಜಾರಿ ತ್ರಾಸಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಸೆಮಿ ಫೈನಲ್ ನಲ್ಲಿ 4 ನೇ ಸ್ಥಾನ ಹಾಗೂ ಫೈನಲ್ ನಲ್ಲಿ 5 ನೇ ಸ್ಥಾನ ವನ್ನು ಪಡೆದು ಉತ್ತಮ ಸಾಧನೆಗೈದಿದ್ದಾರೆ.

ರಾಷ್ಟ ಮಟ್ಟದ ಈ ಯೋಗಾಸನ ಸ್ಪರ್ಧೆಯಲ್ಲಿ 22 ರಾಜ್ಯ ಗಳ ತಂಡಗಳು ಭಾವಹಿಸಿದೆ. ಈಗಾಗಲೇ ಅನೇಕ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸಂದೀಪ್ ಪೂಜಾರಿ ಅನೇಕ ಬಹುಮಾನವನ್ನು ಪಡೆದು ಈಗ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆಗೈದಿರುವುದು ಹೆಮ್ಮಯ ಸಂಗತಿ.











