ಕುಂದಾಪುರ( ಸೆ.24): ಕುಂದಾಪುರ ಮೂಲದ ಕುಮಾರಿ ನಿಶಾಲಿ ಉಮೇಶ್ ಕುಂದರ್ ರವರು ದೆಹಲಿಯಲ್ಲಿ ಇತ್ತೀಚೆಗೆ ನಡೆದ ದೆಹಲಿಯ ಪ್ರತಿಷ್ಠಿತ ಡಿ ಕೆ ಪೆಜೆನ್ಟ್ ಸಂಸ್ಥೆಯವರು ಆಯೋಜಿಸುವ “ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025” ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಒಟ್ಟು 43 ಸ್ಪರ್ಧಾಳುಗಳನ್ನು ಹಿಂದಿಕ್ಕಿ ,ಸ್ಪರ್ಧೆಯ ಭಾಗವಾಗಿ ಯಕ್ಷಗಾನ ಪಾತ್ರದ ಅಭಿನಯ ಮಾಡಿ ಜೂರಿ ಗಳ ಮನಸೆಳೆದದ್ದು ಸಂತೋಷದ ಸಂಗತಿ.
ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾಲಿ, ಬೆಂಗಳೂರಿನ ಶ್ರೀನಿಧಿ ಕಾರ್ಪೋರೇಷನ್ ಸಂಸ್ಥೆಯ ಆಡಳಿತ ನಿರ್ದೇಶಕರು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಉಮೇಶ್ ಕುಂದರ್ ಮತ್ತು ಶ್ರೀಮತಿ ಜಾನಕಿ ಅವರ ಪುತ್ರಿ.












