ಕುಂದಾಪುರ ( ಫೆ.14): ಲಯನ್ಸ್ ಕ್ಲಬ್ ಬಸ್ರೂರು ಮೂಡ್ಲಕಟ್ಟೆಗೆ 317C ಯ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ನೀಲಕಂಠ ಮಂಜುನಾಥ್ ಹೆಗ್ಡೆಯವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.
ತಲ್ಲೂರು ನಿಸರ್ಗ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಸ್ರೂರು ಮೂಡ್ಲಕಟ್ಟೆ ವತಿಯಿಂದ ಗವರ್ನರ್ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ 1.5 ಲಕ್ಷ ರೂಪಾಯಿಗಳ ಸಹಾಯಧನ ನೀಡಲಾಯಿತು. ಇದೇ ಸಂದರ್ಭದಲ್ಲಿ ಲಯನ್ ಉದಯಕುಮಾರ್ ಶೆಟ್ಟಿ ಹಾಲಾಡಿ, ಲಯನ್ ಅರುಣ್ ಹೆಗ್ಡೆ , ಲಯನ್ ಎಕನಾಥ ಬೊಳಾರ್, ಲಯನ್ ರಾಜೀವ್ ಶೆಟ್ಟಿ ,ಲಯನ್ ಜಯಪ್ರಕಾಶ್ ಶೆಟ್ಟಿ ರವರನ್ನು
ಸನ್ಮಾನಿಸಲಾಯಿತು.
ನೂತನ ಸದಸ್ಯರನ್ನು ಕ್ಲಬ್ ಗೆ ಸೇರ್ಪಡೆ ಮಾಡಲಾಯಿತು. ಲಯನ್ಸ್ ಜಿಲ್ಲಾ ಗವರ್ನರ್ ಲಯನ್. ಎನ್.ಎಂ. ಹೆಗ್ಡೆಯವರು ಹೊಸ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹಾಗೆಯೇ 100 % ಮೆಂಬರ್ ಶಿಪ್ ಗ್ರೋತ್ ಕೊಟ್ಟ ಲಯನ್ಸ್ ಜಿಲ್ಲೆ 317 ಸಿ ಯ ಏಕೈಕ ಕ್ಲಬ್ ಆಗಿರುವ ಬಸ್ರೂರು ಮೂಡ್ಲಕಟ್ಟೆ ಲಯನ್ಸ್ ಕ್ಲಬ್ ಎಂದು ಪ್ರಶಂಸಿಸಿ, ಬಸ್ರೂರು ಮೂಡ್ಲಕಟ್ಟೆ ಲಯನ್ಸ್ ಕ್ಲಬ್ ನ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿ ಪ್ರೋತ್ಸಾಹಿಸಿದರು .
ಇದೇ ಸಂದರ್ಭದಲ್ಲಿ ಬಸ್ರೂರು ಮೂಡ್ಲಕಟ್ಟೆ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಬಸವ ಮೆಂಡನ್, ಕೋಶಾಧಿಕಾರಿ ರಾಜೀವ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಬಸ್ರೂರು ಮೂಡ್ಲಕಟ್ಟೆಯ ಅಧ್ಯಕ್ಷರಾದ ಹಾಗೂ ಲಯನ್ಸ್ ಸಮ್ಮೇಳನ ಮತ್ತು ವಿಚಾರ ಸಂಕೀರ್ಣಗಳ ಜಿಲ್ಲಾಧ್ಯಕ್ಷರಾದ ಲಯನ್ ಅಕ್ಷಯ ಹೆಗ್ಡೆ ಮೊಳಹಳ್ಳಿ ನಿರ್ವಹಿಸಿದರು.