ಕುಂದಾಪುರ ( ನ ,25): ಉಡುಪಿಯ ಬುಡೋಖನ್ ಸ್ಪೋರ್ಟ್ಸ್ ಕರಾಟೆ ಕರ್ನಾಟಕ ಇವರು ಆಯೋಜಿಸಿರುವ 22ನೇ ಕೆ.ಬಿ.ಐ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ 2025 ಇದರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಉರ್ದು ಇಲ್ಲಿಯ 7ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಶಾಹೀಮ್ ಕಟಾ ವಿಭಾಗದಲ್ಲಿ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಬಹುಮಾನಗಳಿಸಿದ್ದಾರೆ.

ಇವನರಿಗೆ ಸಿಹಾನ್ ಶೇಕ್ ಬಸ್ರೂರು ಡೋಜೋ ಟೀಮ್ ಕೆ ಡಿಎಫ್ ಕಂಡ್ಲೂರು ಇವರು ತರಬೇತಿಯನ್ನು ನೀಡಿರುತ್ತಾರೆ. ಈ ವಿದ್ಯಾರ್ಥಿಯು ಬಸ್ರೂರಿನ ಶಬ್ನಂ ಭಾನು ಹಾಗೂ ಮಕ್ಬುಲ್ ಅಹಮದ್ ರವರ ಪುತ್ರ.











