ಮಂಗಳೂರು( ಡಿ ,26) : ಇಲ್ಲಿನ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಮಟ್ಟದ ಕರಾಟೆ ಚಾಂಪಿಯನ್ಶಿಪ್ 2025 ಇದರ ಬಾಲಕರ ವೈಟ್ ಬೆಲ್ಟ್ ಕುಮಿಟೆ ವಿಭಾಗದಲ್ಲಿ ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ, ಈಜುಪಟು ನಾಗರಾಜ ಖಾರ್ವಿ ಮತ್ತು ಕೃಪಾ ಖಾರ್ವಿಯವರ ಪುತ್ರ, ಕುಂಟಿಕಾನ ಸೈಂಟ್ ಆ್ಯನ್ಸ್ ಪ್ರೌಢಶಾಲೆಯ 4ನೆಯ ತರಗತಿ ವಿದ್ಯಾರ್ಥಿ ಸಂಚಿತ್ ಖಾರ್ವಿ ಕಂಚಿನ ಪದಕ ಪಡೆದುಕೊಂಡಿದ್ದಾನರೆ.

ಇವರು ಮುಲ್ಲಕಾಡು ಶಾಲೆಯ ಶಿಕ್ಷಕ ದಂಪತಿ ನಾಗರಾಜ ಖಾರ್ವಿ ಮತ್ತು ಕೃಪಾ ಖಾರ್ವಿಯವರ ಪುತ್ರ. ಈಜು ಮತ್ತು ಯಕ್ಷಗಾನದಲ್ಲೂ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಇವನಿಗೆ ಕರಾಟೆ ಗುರು ಸತೀಶ್ ಕೆ ತರಬೇತಿ ನೀಡಿರುತ್ತಾರೆ.










