ಕುಂದಾಪುರ (ಜ. 03): ತಾಲೂಕಿನ ನಾಡದ ಶ್ರೀ ಹಾಡಿಗರಡಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು 2026 ರ ಜನವರಿ 14 ಮತ್ತು 15ರಂದು ನಡೆಯಲಿದೆ.

ಜ.14 ಮಂಗಳವಾರ ಬೆಳಿಗ್ಗೆ ಸಮಯ 12ಕ್ಕೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, 7.30ಕ್ಕೆ ದೈವದರ್ಶನ, ಗೆಂಡಸೇವೆ, 8 ಗಂಟೆಗೆ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, 9.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ.

ರಾತ್ರಿ 9.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಹಾಡಿಗರಡಿ ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ನಾಗೇಶ್ ಪಿ.ಕಾಂಚನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈ ಹೈಕೋರ್ಟ್ ವಕೀಲರಾದ ಚಂದ್ರ ಕೆ.ನಾಯ್ಕ ಬೆದ್ರಾಡಿಮನೆ ನಾಡ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ವೇದಮೂರ್ತಿಶ್ರೀ ಗೋಪಾಲ ಕೃಷ್ಣ ಪುರಾಣಿಕ ಹಡನುಗುಂಡಿ ಶುಭಶಂಸನೆಗೈಯಲಿದ್ದಾರೆ. ಚಂದ್ರಕಾಂತ ರತ್ನ ಫೌಂಡೇಶನ್ ಪ್ರವರ್ತಕರಾದ ಬಸವರಾಜ್ ಕುದ್ರಿಸಾಲು ನಾಡ ಪ್ರತಿಭಾಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮುಂಬೈಯ ನಿವೃತ್ತ ಬಿಎಎಸ್ಎಫ್ ಮೆನೇಜಿಂಗ್ ಡೈರೆಕ್ಟರ್ ಪ್ರದೀಪ್ ಚಂದನ್, ಕುಂದಬಾರಂದಡಿ, ಉದ್ಯಮಿ ಮಂಜುನಾಥ ಪೂಜಾರಿ ಹಾಡಿಮನೆ ಸೇನಾಪುರ, ಶ್ರೀ ಸತೀಶ್ ಮೊಗವೀರ ಉಳ್ಳುರು-74,ಸಂತ ಅಂಥೋನಿ ಚರ್ಚ್ ಪಡುಕೋಣೆ ಇದರ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರಭು ಕೆನಡಿ ಪಿರೇರಾ , ಶ್ರೀ ಶೇಖರ ಮೊಗವೀರ ಪಡುಮನೆ ,ಪಡುಕೋಣೆ , ಶ್ರೀ ರವೀಂದ್ರ ಎಸ್ ಕಾಂಚನ್ ಬಟ್ಟೆಕುದ್ರು ಭಾಗವಹಿಸಲಿದ್ದಾರೆ.

ಚಂದ್ರಕಾಂತ ರತ್ನ ಫೌಂಡೇಶನ್ (ಸಿ.ಆರ್ಎಫ್) ನಾಡ ಇವರ ಸಹಯೋಗದೊಂದಿಗೆ ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ, ಆ ದಿನ ಸಂಜೆ ಹಾಡಿಗರಡಿ ಶ್ರೀ ನಂದಿಕೇಶ್ವರ ಮಕ್ಕಳ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಅರೆಹೊಳೆ ಪ್ರತಿಷ್ಟಾನ ನಂದ ಗೋಕುಲ ಕಲಾವಿದರು ಮಂಗಳೂರು ಇವರಿಂದ ಬಿಡುವನೇ ಬ್ರಹ್ಮಲಿಂಗ ಎನ್ನುವ ಶ್ರೀ ಕ್ಷೇತ್ರ ಮಾರಣಕಟ್ಟೆಯ ಐತಿಹ್ಯ ಸಾರುವ ನೃತ್ಯ ರೂಪಕ ಪ್ರದರ್ಶ ನಡೆಯಲಿದೆ.

ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ಹಣ್ಣುಕಾಯಿ ಸಮರ್ಪಣೆ, ಮಂಗಳಾರತಿ, ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಪ್ರಸಾದ ವಿತರಣೆ, ರಾತ್ರಿ 7.30ಕ್ಕೆ ಮಹಾಪೂಜೆ,ರಾತ್ರಿ 8 ಗಂಟೆಗೆ ಸರ್ವ ದೈವಗಳ ದರ್ಶನ ಸೇವೆ, ಹೂ ಸಮರ್ಪಣೆ, ಬಲಿಪೂಜೆ, 8.30ಕ್ಕೆ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.











