ಕುಂದಾಪುರ(ಜ. 26): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ . ಆಯೋಜಿಸಿದ್ದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆಯು ತಮಿಳುನಾಡಿನ ಪುದುಚೇರಿಯಲ್ಲಿ ಜನವರಿ 25 ರಂದು ನಡೆಯಿತು.

ರಾಷ್ಟ್ರದ ವಿವಿಧ ರಾಜ್ಯಗಳಿಂದ 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಜಯಶ್ರೀ ಮತ್ತು ಸದಾನಂದ ಆಚಾರ್ಯ ತಲ್ಲೂರು ಇವರ ಪುತ್ರ, ಜಯರಾಣಿ ಆಂಗ್ಲ ಮಾದ್ಯಮ ಶಾಲೆ ತಲ್ಲೂರು ಇಲ್ಲಿನ 4 ನೇ ತರಗತಿ ವಿದ್ಯಾರ್ಥಿ ಸದ್ವಿನ್ ಎಸ್ ಆಚಾರ್ಯ ತಲ್ಲೂರು ಇವರು ZX ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಇವರಿಗೆ ಕುಂದಾಪುರ ಸೆಂಟರ್ ನ ಮಖ್ಯಸ್ಥ ಪ್ರಸನ್ನ ಕೆ. ಬಿ., ಬೋಧಕಿ ಶ್ರೀಮತಿ ಮಹಾಲಕ್ಷ್ಮಿ ಮತ್ತು ದೀಪಾ ರವರು ತರಬೇತಿ ನೀಡಿರುತ್ತಾರೆ.










