ಕುಂದಾಪುರ ( ಫೆ .01): ಡಿ.ಡಿ ಚಂದನ ಕೇಂದ್ರ ಬೆಂಗಳೂರು, ಮೈಸೂರು ವಿಭಾಗದಿಂದ ಆಯೋಜಿಸಿದ ರಾಜ್ಯಮಟ್ಟದ ರಾಷ್ಟ್ರೀಯ ಆವಿಷ್ಕಾರ ರಸಪ್ರಶ್ನೆ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳೂರು -(11) ಇದರ 5ನೇ ತರಗತಿಯ ವಚನ ಮತ್ತು ಹಾಸನದ ಸರ್ಕಾರಿ ಪ್ರಾಥಮಿಕ ಶಾಲೆ ಹೊಳೆನರಸೀಪುರದ 5ನೇ ತರಗತಿಯ ಹರ್ಷ ಇವರಿಬ್ಬರು ಪ್ರತಿನಿಧಿಸಿರುತ್ತಾರೆ.


ಈ ಸ್ಪರ್ಧೆಯಲ್ಲಿ ವಚನ ದ್ವಿತೀಯ ಸ್ಥಾನವನ್ನು ಪಡೆದು ಉಳ್ಳೂರು ಸರಕಾರಿ ಶಾಲೆಯ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ವಚನಾಳಿಗೆ ಹಾಗೂ ತರಬೇತಿ ಗೊಳಿಸಿದ ಶಿಕ್ಷಕರಿಗೂ ಶಾಲಾ ಹಳೇವಿಧ್ಯಾರ್ಥಿ ಸಂಘ , ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಭಿನಂದಿಸಿದೆ. ಈಕೆ ಸಾಧು ದೇವಾಡಿಗ ಹಾಗೂ ಚಂದ್ರ ದೇವಾಡಿಗ ಹಾಡಿಮನೆ ಇವರ ಸುಪುತ್ರಿ.











