ಕುಂದಾಪುರ(ಜು,12): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಯುವ ಸಾಧಕರನ್ನು ಗುರುತಿಸಿ, ಅಭಿನಂದಿಸುವ ಯೋಜನೆಯನ್ನು ರೂಪಿಸಲಾಗಿದೆ.
ಕೆಸಿಇಟಿ, ನೀಟ್, ಜೆಇಇ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಅತ್ಯುತ್ತಮ ರಾಂಕ್ ಪಡೆದ ವಿದ್ಯಾರ್ಥಿಗಳು, ಐಎಎಸ್/ಕೆಎಎಸ್ ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆಗೈದ ಅಭ್ಯರ್ಥಿಗಳು, ಸಾಹಿತ್ಯ, ಲಲಿತಕಲೆ, ಕ್ರೀಡೆ, ಪರಿಸರ ಮೊದಲಾದ ರಂಗಗಳಲ್ಲಿ ರಾಜ್ಯ, ರಾಷ್ಟ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಅಥವಾ ಬಹುಮಾನ ಪಡೆದ ಯುವ ಸಾಧಕರು-ಮೊದಲಾದವರ ನ್ನು ಸಂಘದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಗೌರವಿಸಲಾಗುವುದು.
ಈ ಕುರಿತು ಯುವ ಸಾಧಕರು ಅಥವಾ ಅವರ ಹೆತ್ತವರು/ಪೋಷಕರು ಇತ್ತೀಚಿನ ಭಾವಚಿತ್ರದೊಂದಿಗೆ ಸಾಧನೆಯ ವಿವರಗಳನ್ನು ದಿನಾಂಕ: 31-07-2023 ರೊಳಗಾಗಿ youthbuntskpr@gmail.com ಗೆ ಇ ಮೇಲ್ ಮೂಲಕ ಸಲ್ಲಿಸಬಹುದಾಗಿದೆ. ಹೀಗೆ ಸ್ವೀಕೃತಗೊಂಡ ಮಾಹಿತಿಯನ್ನು ಪರಿಶೀಲಿಸಿ, ಅಭಿನಂದನೆಗೆ ಆಯ್ಕೆಯಾದ ಸಾಧಕರಿಗೆ ಸಂಘದ ವತಿಯಿಂದ ಮಾಹಿತಿ ನೀಡಲಾಗುವುದು ಎಂಬುದಾಗಿ ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,.