ಕುಂದಾಪುರ (ಫೆ .2): ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ತಮಿಳುನಾಡಿನ ಪುದುಚೇರಿಯಲ್ಲಿ ನಡೆದ ಐಡಿಯಲ್ ಪ್ಲೇ ಅಬಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರ ವತಿಯಿಂದ ಆಯೋಜಿಸಿದ 21ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ 4 ನೇ ತರಗತಿಯ ವಿದ್ಯಾರ್ಥಿನಿಯಾದ ಛಾಯಾ ವಿ ಆರ್ ಅಬಕಸ್ ನಲ್ಲಿ ಚಾಂಪಿಯನ್ , 5 ನೇ ವಿದ್ಯಾರ್ಥಿ ಮನ್ವಿತ್ ಆರ್ ಫಸ್ಟ್ ರನ್ನರ್ ಅಫ್ , 7ನೇ ತರಗತಿ ವಿದ್ಯಾರ್ಥಿ ಪೃಥ್ವಿನ್ ನಾಲ್ಕನೇ ಸ್ಥಾನವನ್ನು ಮತ್ತು 8ನೇ ತರಗತಿಯ ವಿದ್ಯಾರ್ಥಿ ನಿವೇನ್ ಲೂವಿಸ್ 5ನೇ ಸ್ಥಾನವನ್ನು ಪಡೆದಿರುತ್ತಾರೆ .


ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಅಭಿನಂದಿಸಿದರು.











