ಗಂಗೊಳ್ಳಿ (ಫೆ:15) : ಇಲ್ಲಿನ ವಿಶ್ವ ಸಾಗರ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ವಲಯ ಮಟ್ಟದ 60 ಗಜಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಅಯೋಧ್ಯ ಟ್ರೋಫಿ-2021 ಸರಸ್ವತಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಫೆಬ್ರವರಿ 12 ರಿಂದ 14 ರ ತನಕ ನಡೆಯಿತು. ಅಯೋಧ್ಯ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಹಿನ್ನೆಲೆಯಲ್ಲಿ ಈ ಪಂದ್ಯಾಕೂಟವನ್ನು ಆಯೋಜಿಸಲಾಗಿತ್ತು.
ಸುಮಾರು 24 ತಂಡಗಳು ವಲಯ ಮಟ್ಟದಲ್ಲಿ ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ಅತಿಥೇಯ ವಿಶ್ವ ಸಾಗರ ಕ್ರಿಕೆಟರ್ಸ್ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಫ್ರೆಂಡ್ಸ್ ಬೆಣಗೆರೆ ಗುಜ್ಜಾಡಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಫೆಬ್ರವರಿ 14ರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುಂದಾಪುರ ದೇವಾಡಿಗ ಮಿತ್ರ (ಕದಂ) ದುಬೈ ಇದರ ಗೌರವಾಧ್ಯಕ್ಷರಾದ ಸೀನ ದೇವಾಡಿಗ ಮರವಂತೆ, ಸಪ್ತಸ್ವರ ಸಹಕಾರಿ ಸಂಘ ತಲ್ಲೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ದೇವಾಡಿಗ, ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮ ಪೂಜಾರಿ, ಸದಸ್ಯ ರಾಘವೇಂದ್ರ ಪೈ, ಗುಜ್ಜಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಮೇಸ್ತ ಹಾಗೂ ದೇವಾಡಿಗ ಸಂಘ ಗಂಗೊಳ್ಳಿ ಇದರ ಅಧ್ಯಕ್ಷರಾದ ಶಂಕರ ದೇವಾಡಿಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಂದರ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು.