ಕುಂದಾಪುರ :(ಫೆ: 11) : ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳ ಬಾಲ ಪ್ರತಿಭೆ ಎನಿಸಿಕೊಂಡ 2ನೇ ತರಗತಿಯ ಹೆಮ್ಮೆಯ ವಿದ್ಯಾರ್ಥಿನಿ ಕುಮಾರಿ ಧ್ವನಿ ಕಿರಣ್ ಇವರಿಗೆ ಶ್ರೀ ಕ್ಷೇತ್ರ ಕೋಡಿ ಗ್ರೂಪ್ ಮತ್ತು ತೆಂಕು ಬೀದಿ ವಿದ್ಯುತ್ ದೀಪಾಲಂಕಾರ ಸಮಿತಿ ಕೋಡಿ ಇವರು ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ. ” ಶ್ರೀ ಕ್ಷೇತ್ರ ಕೋಡಿ ಬಾಲಪ್ರತಿಭೆ ಪುರಸ್ಕಾರ” ನೀಡಿ ಸನ್ಮಾನಿಸಲಾಯಿತು.

ವಿಜೇತ ವಿದ್ಯಾರ್ಥಿನಿಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು ಮತ್ತು ಶಿಕ್ಷಕೇತರರು ಅಭಿನಂದಿಸಿದರು.











