ಹಾಲಾಡಿ ( ಫೆ.20): ಜೆಸಿಐ ಹಾಲಾಡಿ ವಾರಾಹಿ ಘಟಕದ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರು ಇಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ʼಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಎನ್ನುವ ವಿಶೇಷ ಕಾರ್ಯಾಗಾರ ವನ್ನು ಫೆಬ್ರವರಿ 18 ರಂದು ಹಮ್ಮಿಕೊಳ್ಳಲಾಯಿತು.

ಜೆಸಿಐ ತರಬೇತುದಾರರು ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ಸ್ ಟ್ರಸ್ಟ್ (ರಿ) ಹೈಕಾಡಿ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಕೃಷ್ಣಮೂರ್ತಿ ಹೈಕಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸರಿಯಾದ ಸಿದ್ಧತೆ ಮಾಡುವ ವಿಧಾನಗಳು, ಸಮಯ ನಿರ್ವಹಣೆಯ ಕೌಶಲ್ಯಗಳು, ಗಮನ ಕೇಂದ್ರೀಕರಣದ ತಂತ್ರಗಳು ಹಾಗೂ ಮನೋಬಲ ವೃದ್ಧಿಸುವ ಚಟುವಟಿಕೆಗಳ ಮೂಲಕ ಸ್ಪಷ್ಟ ಮಾರ್ಗದರ್ಶನ ನೀಡಿದರು. ಪ್ರಶ್ನೆಪತ್ರಿಕೆ ಬರೆಯುವ ವಿಧಾನ, ಅಂಕಗಳನ್ನು ಗಳಿಸುವ ತಂತ್ರಗಳು ಮತ್ತು ಉತ್ತರ ಮಂಡನೆಯ ಮಹತ್ವವನ್ನು ವಿವರಿಸಲಾಯಿತು.

ಸಂವಾದಾತ್ಮಕ ಆಟಗಳು ಮತ್ತು ಉದಾಹರಣೆಗಳ ಮೂಲಕ ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸುವ ಧನಾತ್ಮಕ ಮನೋಭಾವ ಬೆಳೆಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತರಬೇತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ಮೂಡಿ ಪರೀಕ್ಷೆಗೆ ಸನ್ನದ್ಧರಾಗಲು ಸಹಾಯವಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಶ್ರೀ ಉದಯ್ ಕುಮಾರ್ ಬಿ ಇವರು ಭಾಗವಹಿಸಿದ್ದರು. ಶಾಲಾ ಶಿಕ್ಷಕಿಯರಾದ ಗೀತಾ ನಾಯಕ್ ,ಕಾವ್ಯ ,ಸವಿತಾ, ಲೇಡಿ ಜೆಸಿ ಪ್ರೆಸಿಡೆಂಟ್ ಜೆಸಿ ಅವಶ್ಯ ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರು ಜೆಸಿ ಆಶಾ ಬ್ರೈಟ್ ಪರ್ಲ್ ಹಾಲಾಡಿ, ಉಪಾಧ್ಯಕ್ಷರು ಜೆಸಿ ಕೃಷ್ಣ ಭಟ್ ಹಾಲಾಡಿ, ಸಂಯೋಜಕಿ ಜೆಸಿ ದೀಪಾ ಶೆಟ್ಟಿ, ಸಹ ಕಾರ್ಯದರ್ಶಿ ಜೆಸಿ ಮಂಜುಳಾ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.











