ಕುಂದಾಪುರ (ಮಾ.03): ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಯಲ್ಲಿ ಒಟ್ಟು 4 ರ್ಯಾಂಕ್ಗಳನ್ನು ಗಳಿಸುವ ಮೂಲಕ ಉತ್ಕೃಷ್ಟ ಸಾಧನೆಗೈದಿದ್ದಾರೆ.

ಕೊಲ್ಲೂರು ಸಮೀಪದ ಮುದೂರಿನ ಶ್ರೀ ಶೀನ ಪೂಜಾರಿ ಹಾಗೂ ಶ್ರೀಮತಿ ವಿಶಾಲು ದಂಪತಿಗಳ ಪುತ್ರಿ ಶ್ರೇಯಾ ಬಿ.ಕಾಂ. ಪದವಿಯಲ್ಲಿ 2ನೇ ರ್ಯಾಂಕ್, ಕೋಣಿಯ ಶ್ರೀ ಶಂಕರ್ ಮೊಗವೀರ ಹಾಗೂ ಶ್ರೀಮತಿ ಶಾಂತಾ ದಂಪತಿಗಳ ಪುತ್ರಿ ಸುಹಾನಿ ಬಿ.ಬಿ.ಎ. ಪದವಿಯಲ್ಲಿ 3ನೇ ರ್ಯಾಂಕ್, ಅಂಪಾರು ನೆಲ್ಲಿಕಟ್ಟೆಯ ಶ್ರೀ ಪ್ರಭಾಕರ್ ಪಂಗಡಗಾರ ಹಾಗೂ ಶ್ರೀಮತಿ ಶೋಭಾ ದಂಪತಿಗಳ ಪುತ್ರಿ ನಿಖಿತಾ ಬಿ.ಸಿ.ಎ. ಪದವಿಯಲ್ಲಿ 6ನೇ ರ್ಯಾಂಕ್, ಕೋಣಿಯ ಶ್ರೀ ರಮೇಶ್ ಮೊಗವೀರ ಹಾಗೂ ಶ್ರೀಮತಿ ವನಜಾ ದಂಪತಿಗಳ ಪುತ್ರಿ ಶೃದ್ಧಾ ಆರ್. ಬಿ.ಬಿ.ಎ. ಪದವಿಯಲ್ಲಿ 8ನೇ ರ್ಯಾಂಕ್ ಗಳಿಸಿದ್ದಾರೆ.

ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿ, ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.










