ಕುಂದಾಪುರ (ಮಾ.03): ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಯಲ್ಲಿ ಒಟ್ಟು 4 ರ್ಯಾಂಕ್ಗಳನ್ನು ಗಳಿಸುವ ಮೂಲಕ ಉತ್ಕೃಷ್ಟ ಸಾಧನೆಗೈದಿದ್ದಾರೆ. ಕೊಲ್ಲೂರು ಸಮೀಪದ ಮುದೂರಿನ ಶ್ರೀ ಶೀನ ಪೂಜಾರಿ ಹಾಗೂ ಶ್ರೀಮತಿ ವಿಶಾಲು ದಂಪತಿಗಳ ಪುತ್ರಿ ಶ್ರೇಯಾ ಬಿ.ಕಾಂ. ಪದವಿಯಲ್ಲಿ 2ನೇ ರ್ಯಾಂಕ್, ಕೋಣಿಯ ಶ್ರೀ ಶಂಕರ್ ಮೊಗವೀರ ಹಾಗೂ […]
Day: March 5, 2026
ಸಿಎ ಅಂತಿಮ ಪರೀಕ್ಷೆಯಲ್ಲಿ ಅಕ್ಷಯ ಶೆಟ್ಟಿ ಉತ್ತೀರ್ಣ
ಕುಂದಾಪುರ ( ಮಾ .02): ದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ ನೆಡೆಸಿದ 2026 ರ ಸಿಎ ಅಂತಿಮ ಪರೀಕ್ಷೆಯಲ್ಲಿ ಹುಂಚನಿ ಹೆಮ್ಮಕ್ಕಿ ವಸಂತಿ ಶೆಟ್ಟಿ ಮತ್ತು ಉಳ್ಳೂರು 74 ರ ಕರುಣಾಕರ ಶೆಟ್ಟಿಯವರ ಪುತ್ರ ಅಕ್ಷಯ ಶೆಟ್ಟಿ ಯವರು ಉತ್ತೀರ್ಣರಾಗಿರುತ್ತಾರೆ. ಇವರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿ
ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ : ಅತ್ಯಾಧುನಿಕ ಸೌಕರ್ಯಗಳ ಉದ್ಘಾಟನಾ ಕಾರ್ಯಕ್ರಮ
ಹೊಸಂಗಡಿ ( ಮಾ .01): EFFULGENCE ಎಂಬ ಶೀರ್ಷಿಕೆಯಡಿ , “ಪ್ರತಿಭೆಗಳಿಗೊಂದು ಕನ್ನಡಿ, ಹೊಸತನಕ್ಕೊಂದು ಮುನ್ನುಡಿ” ಧ್ಯೇಯ ವಾಕ್ಯದೊಂದಿಗೆ ಅತ್ಯಾಧುನಿಕ ಹಾಗೂ ಮಾದರಿ ಸೌಕರ್ಯಗಳನ್ನೊಳಗೊಂಡ ಮೊದಲ ಕಾಲೇಜು ಎಂಬ ಹೆಗ್ಗಳಿಕೆಯನ್ನು ಸಂಪಾದಿಸಿಕೊಂಡಿರುವ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಯಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. CAN FINS HOMES LIMITED ಪ್ರಾಯೋಜಿತ ಸೋಲಾರ್ ಉತ್ಪಾದನಾ ಘಟಕ ಉದ್ಘಾಟನೆ , CSR ನಿಧಿಯಡಿಯಲ್ಲಿ ಇಡೀ ಕಾಲೇಜಿಗೆ ಸೋಲಾರ್ ಉತ್ಪಾದಿತ […]
ಜೆಇಇ ಮೈನ್ಸ್ ಬಿ.ಆರ್ಚ್ ಪರೀಕ್ಷೆ: ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜಲ್ ಎಸ್ ತೋಳಾರ್ 98.17 ಪರ್ಸoಟೈಲ್
ಹೆಮ್ಮಾಡಿ( ಮಾ .01): ಕೇಂದ್ರ ಸರಕಾರದ ಎನ್ ಟಿ ಎ ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ 2026ರ ಪ್ರಥಮ ಹಂತದ ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜನ್ ಎಸ್ ತೋಳಾರ್ 98.17ಪರ್ಸoಟೈಲ್ ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.










