ಉಡುಪಿ (ಫೆ.21) ಕರೋನಾ ಆತಂಕದ ಕಹಿನೆನೆಪು ಮಾಸುವ ಮುನ್ನವೇ ಮತ್ತೆ ಕಾಡತೋಡಗಿದೆ. ಹೌದು ! ಸರಿಸುಮಾರು 1 ವರ್ಷ ಕಳೆದರೂ ಕೋವಿಡ್ ಆರ್ಭಟ ಇನ್ನೂ ನಿಂತಿಲ್ಲ. ಮತ್ತೆ ರಾಜ್ಯದ ಜನತೆಗೆ ಕೋವಿಡ್ ಭಯ ಎದುರಾಗಲಿದೆ!
ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕೋವಿಡ್ ಎರಡನೇ ಅಲೆಯಿಂದ ಉಂಟಾಗುವ ತೊಂದರೆಗಳಿಂದ ರಾಜ್ಯದ ಜನತೆಯನ್ನು ರಕ್ಷಿಸುವ ಕುರಿತು ಸಕಲ ಸಿದ್ದತೆಗೆ ಮುಂದಾಗಿದೆ . ಇಗಾಗಲೇ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಜನರ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿದ್ದು, ಗಡಿ ಭಾಗಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರುವ ಬಗ್ಗೆ ಸರಕಾರದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಗಾಗಲೇ ಕೇರಳದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದ್ದು, ಟೆಸ್ಟ್ ನಡೆಸಿರುವ ಬಗ್ಗೆ ಸರ್ಟಿಫಿಕೇಟ್ ತೋರಿಸಿದರೆ ಮಾತ್ರ ರಾಜ್ಯದ ಗಡಿ ಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡಲು ಸೂಚನೆ ನೀಡಲಾಗುವುದು ಗ್ರಹ ಸಚಿವರು ಹೇಳಿದ್ದಾರೆ.