ಕೋಟೇಶ್ವರ (ಫೆ. 21): ಕುಂದಾಪುರದ ಪ್ರಸಿದ್ಧ ಪ್ರವಾಸಿ ತಾಣ ಕೋಡಿ ಕಡಲತೀರದಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 84ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಫೆಬ್ರವರಿ 21ರಂದು ಜರುಗಿತು.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಎಫ್.ಎಸ್.ಎಲ್ ಇಂಡಿಯಾ, ಬಾರ್ಕೂರು ಕಾಲೇಜಿನ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು 100ಕ್ಕೂ ಅಧಿಕ ಮದ್ಯದ ಬಾಟಲಿಗಳನ್ನು ಹಾಗೂ 10ಕ್ಕೂ ಅಧಿಕ ಚೀಲ ತ್ಯಾಜ್ಯ ಸಂಗ್ರಹಿಸಿದರು.
ನಿರಂತರವಾಗಿ ಕೋಡಿ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ, ಕಡಲಾಮೆ ಮೊಟ್ಟೆ ರಕ್ಷಣೆ ಜೀವವೈವಿಧ್ಯತೆ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನವರು ನಡೆಸಿಕೊಂಡು ಬರುತ್ತಿದ್ದಾರೆ.











