ಇವರು ಪೆನ್ನನೊಮ್ನೆ ಹಿಡಿದರೆ ಕಡಲ ಅಲೆಗಳ ನೀನಾದಕ್ಕು ಅಕ್ಷರಗಳಲ್ಲೆ ಹೊಂಬಣ್ಣ ಹೊದಿಸಬಲ್ಲರು, ಆಡುನುಡಿಗಳನ್ನೆ ಬಿಲ್ಲು ಮಾಡಿಕೊಂಡು ಹೂಬಾಣದಂತೆ ಎದೆಗೆ ನೂಗ್ಗ ಬಲ್ಲದು ಇವರ ಬತ್ತಳಕೆಯ ಅಕ್ಷರಾಸ್ತ್ರ…!
D ಬಾಸ್ ಇಂಟ್ರೂಡಕ್ಷನ್ನು ,ರಾಕಿ ಬಾಯ್ಗೆ ಸಲಾಮು, ಕಿಚ್ಚನ ಸ್ಟೈಲು, ಅಪ್ಪು ಡ್ಯಾನ್ಸು ಇದೆಲ್ಲವಕ್ಕು ಇವರ ಸಾಲುಗಳೆ ಮಾಸು… ಪ್ರೀತಿ ಕಳೆದುಕೊಂಡವರಿಗೆ, ಪ್ರಣಯದಲ್ಲಿ ಬಿದ್ದೊರಿಗೆ ಇವರ ಹಾಡುಗಳೆ ಕ್ಲಾಸು…ಆಸ್ತಿಕರಿಗು, ನಾಸ್ತಿಕರಿಗೂ ಇವರು ಬರೆದಿರೊ ಹಾಡೇ ಫೆವರೇಟು.. ಕ್ವಾರ್ಟರ್ ಹಾಕೊಂಡು ಜೂಮಲ್ಲಿರುವವರ ಮೊಬೈಲ್ ಗ್ಯಾಲರಿಯಲ್ಲು ಇವರ ಹಾಡುಗಳದ್ದೆ ಫುಲ್ ಲೀಸ್ಟು..!!
ದಕ್ಷಿಣ ಭಾರತದ ಮ್ಯೂಸಿಕ್ ಮಾಂತ್ರಿಕರಾದ ಇಳಯರಾಜ, ಹಂಸಲೇಖರಿಂದ ಕೂಡಿ ಹರಿಕ್ರಷ್ಣ, ಅರ್ಜುನ್ ಜನ್ಯ, ರವಿ ಬಸ್ರೂರಂತ ಸಂಗೀತಾ ನಿರ್ದೇಶಕರ ರಸರಾಗಕ್ಕೆ ಶಭ್ದಗಳಲ್ಲೆ ಹೆಗಲಾದರು. ಚಂದನವನದ ಬಣ್ಣದ ಬೀದಿಗೆ ಪದಕಮಲಗಳ ಪೊಣಿಸಿದ ಚಿ.ಉದಯ್ ಶಂಕರ್, R.N ಜಯಗೋಪಲ್, ದೊಡ್ಡೆರಂಗೆಗೌಡ, ಹಂಸಲೇಖ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟರಂತಹ ಅಕ್ಷರ ಬ್ರಹ್ಮಾದಿಗಳ ಸಾಲಲ್ಲಿ ನಿಲ್ಲುವ ಈ ಜಮಾನದ ಶುಧ್ದ ಸಾಹಿತಿ ನವಯುಗಕವಿಪುಂಗವ ಕವಿರತ್ನ ವಿ.ನಾಗೇಂದ್ರ ಪ್ರಸಾದ್..!
ಗಾಂಧಿನಗರದಲ್ಲಿ ‘ಗಾಜಿನಮನೆ’ಯಿಂದ ಹೊರಟ ಇವರ ಅಕ್ಷರ ಮೆರವಣಿಗೆ ಇನ್ನೂ ನಿಂತಿಲ್ಲ ವಿಜ್ರಂಭಣೆಯಿಂದ ಮುನ್ನುಗ್ಗುತ್ತಿದೆ… 20 ವರ್ಷಗಳಲ್ಲಿ 3000ಕ್ಕೂ ಅಧಿಕ ಹಾಡುಗಳನ್ನು ರಚಿಸಿದ್ದಾರೆ.
1999ರಲ್ಲಿ ಶುರವಾದ ಇವರ ಹಾಡುಗಳ ಅಬ್ಬರ ಇಂದಿಗೂ ಪ್ರತೀ ವರ್ಷ ಹಿಟ್ ಲಿಸ್ಟ್ ಸೇರುತ್ತಲೇ ಇದೆ, ಮುಂಬರುವ ಸ್ಯಾಂಡಲ್ ವುಡ್ನ ಬಹುನೀರಿಕ್ಷಿತ ಚಿತ್ರಗಳಲ್ಲು ಇವರು ಬರೆದಿರೊ ಹಾಡುಗಳೆ ಸಖತ್ ಸೌಂಡ್ ಮಾಡುತ್ತಿವೆ.
ವರಕವಿ ದ.ರಾ ಬೇಂದ್ರೆಯಿಂದ ಪ್ರರೇಪಿತರಾಗಿ ಪ್ರೇಮಕವಿ ಆಗಲು ಹೊರಟು ನಂತರ ಡುಯೆಟ್, ಟಪ್ಪಂಗುಚ್ಚಿ, ಪ್ಯಾತೊ ಎಲ್ಲಾದರಲ್ಲು ಸೈ ಎನಿಸಿಕೊಂಡರು ಕೇಳುಗರಿಂದ ಜೈ ಎನಿಸಿಕೊಂಡರು..
ಸೈಲಾಂಟಾಗಿ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಎನ್ನುತ್ತಾರೆ, ‘ಸೇಟು ಫಿಗರ್ ಬುಟ್ಟಿಗೆ ಬೀಳುತಾ ಇದೆ ಎತ್ತಾಕೊಂಡ್ ಓಡೊಗೊ ಐಡಿಯ ಇದೆ’ ಎನ್ನುತ್ತಾ ವೈಲೆಂಟಾಗಿ ಬರೆಯುತ್ತಾರೆ.. ‘ಒಬ್ಬನೆ ಒಬ್ಬನೆ’ ಎನ್ನುತ್ತಾ ‘ಶ್ರೀ ಮಂಜುನಾಥ’ ಭಕ್ತಿಪರವಶದಲ್ಲಿ ತೇಲಿಸುತ್ತಾರೆ. ‘ನೀನೆ ರಾಮ ನೀನೆ ಶ್ಯಾಮ’ ದೇವನೊಬ್ಬನೆಂದು ಹೇಳುತ್ತಾರೆ..! ಈ ಪರಿಯ ಸಾಹಿತ್ಯ ಸಾಲುಗಳನ್ನರಸಿ ಪ್ರತಿಷ್ಠಿತ ಪ್ರಶಸ್ತಿಗಳು ಬಂದವು.
ಹೆಣ್ಣುಮಕ್ಕಳ ನೆಚ್ಚಿನ ಗೀತೆ ಅಪ್ಪ I love you ಗೀತೆ ರಚನೆಗೆ ಫಿಲ್ಮ್ ಫೇರ್ ಸೇರಿದಂತೆ ಹಲವು ಸೌಂತ್ ಇಂಡಸ್ಟ್ರಿಯ ಅವಾರ್ಡಗಳು ಇವರ ಜೋಳಿಗೆಯಲ್ಲಿ ಬಿದ್ದವು. ಅಂಬರೀಷ ಚಿತ್ರದ ಕಣ್ಣಲೆ ಬಚ್ಚಿಡಲ ಹಾಡಿಗು ಫಿಲ್ಮ್ ಪೇರ್ ಬಂದಿತ್ತು. ಇಂತಹ ಎಷ್ಟೇ ಪ್ರಶಸ್ತಿ ಗೌರವಗಳು ಲಭಿಸದರು ಕಿಂಚಿತ್ತು ಬದಲಾಗದೆ ಸಿಂಪಲ್ ಆಗಿರುತ್ತಾರೆ ನಾಗೇಂದ್ರ ಪ್ರಸಾದ್.
ಇಂತ ಅಕ್ಷರ ಮಾಯ್ಕಾರ ಪಡುಗಡಲ ತೀರಕ್ಕೆ ಬರುತ್ತಿದ್ದಾರೆ.. ಇವರ ಸುಂದರ ಸಾಲುಗಳಿಗೆ KGF ಖ್ಯಾತಿಯ ಐರಾ ಆಚಾರ್ಯ, ನಿನಾದ್ ನಾಯಕ್, ಸರಿಗಮಪದಲ್ಲಿ ಗುರುತಿಸಿಕೊಂಡ ಶ್ರೀ ಹರ್ಷ, ಅಭಿಷೇಕ್ ರಾವ್ ರಂತ ಸುಮಧುರ ಕಂಠಸಿರಿಗಳು ಜೊತೆಯಾಗಲಿದ್ದಾರೆ.
ಇದೆ ಫೆಬ್ರವರಿ 27ರ ಇಳಿ ಸಂಜೆಯ ಬೆಳದಿಂಗಳಂದು ಕೊಟೇಶ್ವರದ ಸಹನಾ ಸಭಾಂಗಣದಲ್ಲಿ ‘ಸವಿಸಂಜೆ’..! ಸಂಗೀತಾ ಸಾಮ್ರಾಜ್ಯಕ್ಕೆ ನಿಮ್ಮೆಲ್ಲರಿಗು ಸ್ವಾಗತ..
ಮಿಸ್ ಮಾಡಬೇಡಿ..!!
– ಪ್ರದೀಪ್_ಪಡುಕರೆ..