ವಂಡ್ಸೆ (ಮಾ. 1): ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಸರಾಂತ ಶಿಲ್ಪಿ , ಕರ್ನಾಟಕದ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಬೆಂಗಳೂರು ಇದರ ನಿರ್ದೇಶಕರಾದ ಕಳಿ ಚಂದ್ರಯ್ಯ ಆಚಾರ್ಯ ಇವರನ್ನು ಉಪ್ರಳ್ಳಿ ಶ್ರೀಕಾಳಿಕಾಂಬ ದೇವಸ್ಥಾನದ ವೇದಿಕೆಯಲ್ಲಿ ಬೈಂದೂರಿನ ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಸನ್ಮಾನಿಸಿದರು.
ಉಪ್ರಳ್ಳಿ ಮೂಡು ಮಠ ಶ್ರೀ ಕಾಳಿಕಾಂಬ ದೇವಸ್ಥಾನದ ಮುಕ್ತೇಶರರಾಗಿ ಸೇವೆ ಸಲ್ಲಿಸುತ್ತಿರುವ ಇವರು ವಿಶ್ವಕರ್ಮ ಸಮುದಾಯದ ಮುಖಂಡರಾಗಿದ್ದು ವಿವಿಧ ದೇವಾಲಯ ಅಡಳಿತ ಮಂಡಳಿಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಇವರು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ ನಿರ್ದೇಶಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶ್ರೀಕಾಳಿಕಾಂಬ ಎಜುಕೇಶನ್ ಟ್ರಸ್ಟ್(ರಿ) ಮೂಡುಮಠ ಇವರು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು.













