ಕುಂದಾಪುರ (ಮಾ.1): ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ ಇದರ ಯಕ್ಷಗಾನ ಸಂಘದ ವತಿಯಿಂದ ಫೆಬ್ರವರಿ 27ರಂದು ಸಮೀಪದ ಭಂಡಾರ್ಕಾರ್ಸ್ ಕಾಲೇಜಿನ ಯಕ್ಷಗಾನ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಯಕ್ಷಗಾನ ವಸ್ತುಸಂಗ್ರಹಾಲಯದ ಸಂಯೋಜಕರು ಹಾಗೂ ಇಂಗ್ಲಿಷ್ ಉಪನ್ಯಾಸಕ ಶಶಾಂಕ ಪಟೇಲ್ ಯಕ್ಷಗಾನದ ವಿವಿಧ ಮಾದರಿ ಮತ್ತು ಪರಿಕರಗಳ ಬಗ್ಗೆ ಮಾಹಿತಿ ನೀಡಿದರು. ಬಡಗು, ಬಡಾಬಡಗು ಹಾಗೂ ತೆಂಕುತಿಟ್ಟು ಯಕ್ಷಗಾನದ ವೈಶಿಷ್ಟತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಯಕ್ಷಗಾನ ಸಂಘದ ಸಂಯೋಜಕರಾದ ರಕ್ಷಿತ ರಾವ್ ಗುಜ್ಜಾಡಿ ಹಾಗೂ ಸಹ ಸಂಯೋಜಕಿ ಶ್ರೀಮತಿ ದೀಪಿಕಾ ಉಪಸ್ಥಿತರಿದ್ದರು.