ವಂಡ್ಸೆ (ಮಾ.3) ಮಹಾವಿಷ್ಣು ಯುವಕ ಮಂಡಲ ಕಟ್ ಬ್ಯಾಲ್ತೂರು ಇದರ 2021-22 ನೇ ಸಾಲಿನ
ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಮಹಾವಿಷ್ಣು ಯುವಕ ಮಂಡಲ ದ ಅಧ್ಯಕ್ಷರಾಗಿ ಶ್ರೀಕಾಂತ್ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಗುರುರಾಜ್ ಗಾಣಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾದ ಬಸವ ಮೊಗವೀರ ಇವರ ಅಧ್ಯಕ್ಷತೆಯಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ಸಭೆಯಲ್ಲಿ ಯುವಕ ಮಂಡಲದ ಸಂಚಾಲಕರದ ಚಂದ್ರ ನಾಯ್ಕ್, ನರಸಿಂಹ ಗಾಣಿಗ, ರವೀಶ್ ಡಿ. ಎಚ್, ರಾಘವೇಂದ್ರ ಜೋಗಿ ಕೆರೆಮನೆ,ಕಿಶೋರ್ ಆಚಾರ್ ಹೆಮ್ಮಾಡಿ, ರಾಮಚಂದ್ರ ಕುಲಾಲ್, ರವಿ ದೇವಾಡಿಗ, ಪ್ರದೀಪ್ ದೇವಾಡಿಗ,ನಾಗರಾಜ ಗಾಣಿಗ , ಪ್ರತಾಪ್ ಆಚಾರ್ಯ ಮೊದಲದವರು ಉಪಸ್ಥಿತರಿದ್ದರು. ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಏಪ್ರಿಲ್ ತಿಂಗಳ 3ನೇ ತಾರೀಕು ನೆಡೆಸಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಿದರು.. ದೀಪಕ್ ಆಚಾರ್ಯ ಸ್ವಾಗತಿಸಿದರು, ಸಂದೀಪ್ ದೇವಾಡಿಗ ವಂದಿಸಿದರು. ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು .