ಕುಂದಾಪುರ (ಮಾ. 4) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜನ ಯುವ ರೆಡ್ಕ್ರಾಸ್ ಘಟಕ, ಮಹಿಳಾ ಘಟಕ ಹಾಗೂ ಭಾರತೀಯ ರೆಡ್ಕ್ರಾಸ್ ಕುಂದಾಪುರ ಘಟಕದ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್ಕಿನ್ ವಿತರಣೆ’ ಕಾರ್ಯಕ್ರಮ ಮಾರ್ಚ್ 4 ರಂದು ನಡೆಯಿತು.
ಭಾರತೀಯ ರೆಡ್ಕ್ರಾಸ್ ಕುಂದಾಪುರ ಘಟಕದ ಚೇರ್ಮನ್ ಶ್ರೀ ಜಯಕರ ಶೆಟ್ಟಿ ಮಾತನಾಡಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟಟ್ಟದ ನ್ಯಾಪ್ಕಿನ್ಗಳು ಲಭ್ಯವಿದ್ದು, ಕಾಲೇಜು ವಿದ್ಯಾರ್ಥಿನಿಯರ ಆರೋಗ್ಯದ ಹಿತದೃಷ್ಟಿಯಿಂದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ಉಚಿತವಾಗಿ ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ಕ್ರಾಸ್ ಕುಂದಾಪುರದ ಖಜಾಂಚಿ ಶ್ರೀ ಶಿವರಾಮ್ ಶೆಟ್ಟಿ, ಜನೌಷಧಿ ಕೇಂದ್ರದ ಉಸ್ತುವಾರಿ ಶ್ರೀ ಗಣೇಶ್ ಆಚಾರ್, ಸದಸ್ಯರಾದ ಡಾ|ಸೋನಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೊವಾಡಿ, ಯುವ ರೆಡ್ಕ್ರಾಸ್ ಘಟಕದ ಸಂಯೋಜಕರಾದ ಶ್ರೀ ಯೋಗೀಶ್ ಶ್ಯಾನುಭೋಗ್ ಹಾಗೂ ಸೌಮ್ಯ ಎನ್. ಕುಂದರ್, ಮಹಿಳಾ ಘಟಕದ ಸಹ ಸಂಯೋಜಕಿ ದೀಕ್ಷಿತಾ ಯು.ಜಿ., ವಿದ್ಯಾರ್ಥಿನಿ ಪ್ರತಿನಿಧಿ ಪೂರ್ಣಿಮಾ ಉಪಸ್ಥಿತರಿದ್ದರು. ಮಹಿಳಾ ಘಟಕದ ಸಂಯೋಜಕರಾದ ಶ್ರೀಮತಿ ಶ್ವೇತಾ ಯು. ವಂದಿಸಿ, ಶ್ರೀಮತಿ ನಿಶಾ ಶೆಟ್ಟಿ ನಿರೂಪಿಸಿದರು.