ಉಡುಪಿ (ಮಾ.6): ಜಗತ್ತಿನಲ್ಲಿ ಮೂರನೇ ಯುದ್ಧ ಅಂತ ಹೆಸರಿಸುವುದಾದರೆ ಅದು ನೀರಿನ ಸಮಸ್ಯೆಯ ಯುದ್ದ. ಇಂದು ಪ್ರತಿಯೊಂದು ರಾಷ್ಟ್ರವೂ ನೀರಿನ ಅಭಾವವನ್ನು ಎದುರಿಸುತ್ತಿದೆ. ನೀರಿನ ಸಮೃದ್ಧಿಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ದೇಶವಾಗಿದೆ. ಆದರೆ ಅದರ ಸರಿಯಾದ ಬಳಕೆ ಮತ್ತು ಸಂರಕ್ಷಣೆ ಇಲ್ಲದೆ ನೀರಿನ ಅಭಾವವನ್ನು ನಾವಿಂದು ಎದುರಿಸಬೇಕಾಗಿದೆ. ಇದರ ನಿವಾರಣೆಯಾಗಬೇಕಾದರೆ ನಾವಿಂದು ಮಳೆ ನೀರನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ ಮರು ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದು ರತ್ನ ಶ್ರೀ ಜೋಸೆಫ್ ಜಿ. ರೆಬೆಲ್ಲೊ ಹೇಳಿದರು.
ಅವರು ಸಂತ ಮೇರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ನೀರಿನ ಸಂರಕ್ಷಣೆ ಮತ್ತು ಮರುಪೂರಣ ವಿಷಯದ ಕುರಿತು ಮಾತನಾಡುತ್ತಾ ನೀರಿನ ಸಂರಕ್ಷಣೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ರವರು
ನೀರಿನ ಬಳಕೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿ,ಮಿತವಾಗಿ ಬಳಸುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇಂದಿನ ತುರ್ತುಗಳಲ್ಲೊಂದು. ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು ಅಭಿಪ್ರಾಯಪಟ್ಟರು.
ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಜೆಸಿಂತ ಡಿ’ಸೋಜ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮವನ್ನು ಕಾಲೇಜಿನ ರಕ್ಷಕ-ಶಿಕ್ಷಕ ಸಂಘ ಮತ್ತು ಗ್ರೀನ್ ಟೀಚರ್ ಪೋರಂ, ಎನ್.ಎಸ್ ಎಸ್, ಎನ್.ಸಿ.ಸಿ, ರೋವರ್ಸ ಮತ್ತು ರೇಂಜರ್ಸ, ಯುತ್ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಘಟಕಗಳದ ಸಂಯೋಜಕರಾದ ಕು.ಯಶೋಧ, ಶ್ರೀವಿಠಲ್ ನಾಯಕ್ ,ಶ್ರೀ ಪ್ರವೀಣ್ ಕುಮಾರ್, ಶ್ರೀಪ್ರೇಮನಾಥ್ ,ಶ್ರೀಮುರಳಿ ಉಪಸ್ಥಿತರಿದ್ದರು. ಕು.ಸಹನಾ ಸ್ವಾಗತಿಸಿದರು, ದೀಪ್ತಿ ವಂದಿಸಿದರು. ಕು.ಸೌಜನ್ಯ ಕಾರಕ್ರಮ ನಿರೂಪಿಸಿದರು.