ಕುಂದಾಪುರ (ಮಾ. 9) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ “ಬಜೆಟ್ 2021 ಕುರಿತು ಚರ್ಚೆ” ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯುನಿಯನ್ ಬಜೆಟ್ 2021ರ ಪ್ರಮುಖ ಮುಖ್ಯಾಂಶಗಳಾದ ಆರೋಗ್ಯ ಮತ್ತು ಯೋಗಕ್ಷೇಮ, ಭೌತಿಕ ಮತ್ತು ಆರ್ಥಿಕ ಬಂಡವಾಳ ಮತ್ತು ಮೂಲ ಸೌಕರ್ಯ, ಮಹತ್ವಾಕಾಂಕ್ಷೆಯ ಭಾರತ ಕ್ಕೆ ಅಂತರ್ಗತ ಅಭಿವೃದ್ಧಿ, ಮಾನವ ಬಂಡವಾಳವನ್ನು ಉತ್ತೇಜಿಸುವ ,ನಾವೀನ್ಯತೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಟ ಸರ್ಕಾರ ಮತ್ತು ಗರಿಷ್ಟ ಆಡಳಿತ ಇದರ ಕುರಿತು ಡಾ| ಶ್ರೀಪತಿ ಕಲ್ಲುರಾಯ, ನಿವೃತ್ತ ಪ್ರೊಫೆಸರ್ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ಇವರು ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಿಧ್ಯಾರ್ಥಿನಿ ದೀಕ್ಷಾ ಪ್ರಾರ್ಥಿಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಸುಧಾಕರ್ ಪಾರಂಪಳ್ಳಿ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಜ್ಯೋತಿ ಮೊಗವೀರ ವಂದಿಸಿದರು. ವಿದ್ಯಾರ್ಥಿನಿ ಆಯಿಷಾ ನಝೀರಾ ನಿರೂಪಿಸಿದ್ದರು.











