ಕುಂದಾಪುರ (ಮಾ. 10) ಶ್ರೀ ಶಾರದಾ ಕಾಲೇಜಿನ ಮಹಿಳಾ ವೇದಿಕೆ ಮತ್ತು ರೋವರ್ ಹಾಗೂ ರೇಂಜರ್ ಘಟಕದ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾರಣೆ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಅಂತರಾಷ್ಟ್ರೀಯ ಮಹಿಳಾ ದಿನ ಒಂದು ವಿಶೇಷ ದಿನವಾಗಿದ್ದು, ಮಹಿಳೆ ಒಂದು ಕುಟುಂಬದ ಆಧಾರ ಸ್ತಂಭವಾಗಿ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ವಿಜ್ಞಾನ, ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ನೆನೆಯುವ ದಿನವಾಗಿದೆ. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ಮತ್ತು ನೈತಿಕ ಬೆಂಬಲ ದೊರಕಬೇಕು ಎಂದರು. ಮಹಿಳಾ ವೇದಿಕೆಯ ಸಂಯೋಜಕರಾದ ಉಪನ್ಯಾಸಕಿ ಅನಿತಾ ವಿ.ಎಂ. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ವಿಧ್ಯಾರ್ಥಿನಿ ಪ್ರಜ್ಞಾ ಪ್ರಾರ್ಥಿಸಿದರು.
ಉಪನ್ಯಾಸಕಿ ಮಮತಾ ಧನ್ಯವಾದಗೈದರು. ವಿದ್ಯಾರ್ಥಿನಿ ಪೂರ್ಣಿಮ ಮತ್ತು ಅಶ್ಚಿತ್ತಾ ಕಾರ್ಯಕ್ರಮ ನಿರೂಪಿಸಿದ್ದರು. ಮಹಿಳಾ ದಿನಾಚರಣೆಂದು ಪ್ರಯುಕ್ತ ವಿದ್ಯಾರ್ಥಿನಿಯರಿಂದ ಮಹಿಳೆ ಮುಂದಿರುವ ಸವಾಲುಗಳ ಕುರಿತು ವಿವಿಧ ಪ್ರಹಸನ, ನೃತ್ಯ, ಯಕ್ಷಗಾನ, ಹಾಡುವುದರ ಮೂಲಕ ಕಾರ್ಯಕ್ರಮ ಮೆರುಗನ್ನು ಹೆಚ್ಚಿಸಿತ್ತು.