ಉಡುಪಿ (ಮಾ. 12) ಶ್ರೀಧವಲಾ ಕಾಲೇಜಿನ ಕಲಾ ಸಂಘದ 2020-21ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯು ಮಾರ್ಚ್ 6 ರಂದು ಜರುಗಿತು. ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕಲಾ ವಿದ್ಯಾರ್ಥಿಗಳ ಮುಂದಿನ ಹೆಜ್ಜೆ ಮತ್ತು ಹಾದಿ ಈ ವಿಷಯದ ಕುರಿತು ಮಾತನಾಡಿದರು.
ಕಲಾ ವಿದ್ಯಾರ್ಥಿಗಳಿಗಿರುವ ಅವಕಾಶಗಳು ಮತ್ತು ಅದನ್ನು ಬಳಸಿಕೊಳ್ಳಬೇಕಾದ ರೀತಿಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಾ ಸಂಘದ ಸಂಚಾಲಕರಾದ ಶ್ರೀಮತಿ ಕುಸುಮ ಉಪಸ್ಥಿತರಿದ್ದರು. ಕಲಾ ಸಂಘದ ಕಾರ್ಯದರ್ಶಿ ಕು. ಶ್ರುತಿ ಸ್ವಾಗತಿಸಿದರು. ಕಲಾ ಸಂಘದ ಜೊತೆ ಕಾರ್ಯದರ್ಶಿ ಸುಮಿತ್ ವಂದಿಸಿದರು. ಮೈಕಲ್ ಪಿರೇರ ಕಾರ್ಯಕ್ರಮ ನಿರೂಪಿಸಿದರು.